ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗುವ ದುಷ್ಟರಿಣಾಮಗಳ ಸುತ್ತಲಿನ ಕಥೆ ಹೊಂದಿರುವ ಚಿತ್ರ ‘ಮನಸ್ಸಿನಾಟ’. ಈ ವಾರ ಚಿತ್ರ ಬಿಡುಗಡೆ ಆಗುತ್ತಿದೆ. ಚಿತ್ರಕ್ಕೆ `ಬ್ಲೂ ವೆಲ್ ಗೇಮ್’ – ನೀಲಿ ತಿಮಿಂಗಿಲ ಎಂಬ ಉಪ ಶೀರ್ಷಿಕೆ ನೀಡಲಾಗಿದೆ.
ಈ ತಂತ್ರಜ್ಞಾನದ ಯುಗದಲ್ಲಿ ಮಾನವೀಯ ಮೌಲ್ಯ ಕಾಪಾಡಿಕೊಂಡು ಸಾಗುವ ಅವಶ್ಯಕತೆ ಇದೆ ಎಂದು ಸಾರುವ ಈ ‘ಮನಸ್ಸಿನಾಟ’ ಮುಖ್ಯವಾಗಿ ಮೊಬೈಲ್ ಬಳಕೆಯಿಂದ ಜರುಗುವ ಘಟನೆಗಳ ವಿಪತನ್ನು ಹೇಳುತ್ತಾ ಜೊತೆಗೆ ಮನರಂಜನೆ ಹಾಗೂ ಭಾವನೆಗಳ ಬೆಸುಗೆಯ ಕಥಾ ವಸ್ತುವಿನಲ್ಲಿ ಹೊಂದಿದೆ.
ನಿಕೇತನ್ ಸಿನಿಮಾಸ್ ಮತ್ತು ನೆರಳು ಮೀಡಿಯಾ ಅಡಿಯಲ್ಲಿ ಡಿ ಮಂಜುನಾಥ್, ಹನುಮೇಶ್ ಗಂಗಾವತಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಆರ್ ರವೀಂದ್ರ ಈ ಸಿನಿಮಾ ನಿರ್ದೇಶಕರು. ಡಿ ಮಂಜುನಾಥ್ ಅವರ ಕಥೆಗೆ ಆರ್ ರವೀಂದ್ರ ಹಾಗೂ ಮಧು ಕಟ್ಟೆ ಚಿತ್ರಕಥೆ ಮಾಡಿದ್ದಾರೆ, ಹನುಮೇಶ್ ಪಾಟೀಲ್ ಸಂಕಲನ, ಸಚಿನ್ ಸಂಗೀತ, ಮಂಜುನಾಥ್ ಬಿ ನಾಯಕ್ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಹಾಡಿರುವ ಒಂದು ಭಾವನಾತ್ಮಕ ಹಾಡನ್ನು ಡಾ ವಿ ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ.
ತಾರಾಗಣದಲ್ಲಿ ಮಾಸ್ಟರ್ ಹರ್ಷಿತ್, ಮಾಸ್ಟರ್ ಮಂಜು, ಪ್ರೀತಿಕ, ಸ್ವಪ್ನ, ನಟರಾಜ್, ದತ್ತಣ್ಣ, ಯಮುನ ಶ್ರೀನಿಧಿ, ರಾಮಸ್ವಾಮಿ, ಚಂದನ್, ಮಂಜುನಾಥ್ ಹೆಗ್ಡೆ, ರಮೇಶ್ ಪಂಡಿತ್, ಹನುಮೇಶ್ ಪಾಟೀಲ್, ಡಿ ಮಂಜುನಾಥ್, ಪುಷ್ಪ, ವಾಸು ಪ್ರಸಾದ್, ಸೋನು ಉಪಾಧ್ಯಾಯ ಹಾಗೂ ಇತರರು ಇದ್ದಾರೆ.
Pingback: Sig sauer firearms for sale
Pingback: Sexual Assault Evidence