‘ಜುರಾಸಿಕ್ ಪಾರ್ಕ್’ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನ್ಯೂಜಿಲೆಂಡ್ ಮೂಲದ ಹಾಲಿವುಡ್‌ನ ಹಿರಿಯ ನಟ ಸ್ಯಾಮ್ ನೀಲ್ ಸಿಡ್ನಿಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 78 ವರ್ಷ ವಯಸ್ಸಾಗಿತ್ತು. ಕುಟುಂಬದವರು ಇನ್‌ಸ್ಟಾಗ್ರಾಮ್ ಪ್ರಕಟಣೆಯ ಮೂಲಕ ಸ್ಯಾಮ್ ನೀಲ್ ಅವರ ನಿಧನ ದೃಢಪಡಿಸಿದ್ದಾರೆ. ಸ್ಯಾಮ್ ನೀಲ್ ಕಳೆದ ಕೆಲವು ವರ್ಷಗಳಿಂದ ಅಪರೂಪದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಿಮೋಥೆರಪಿ ಫಲಕಾರಿಯಾಗದ ನಂತರ ವಿಶೇಷ ಚಿಕಿತ್ಸೆಗೆ ಒಳಗಾಗಿ ಈ ವರ್ಷದ ಏಪ್ರಿಲ್‌ನಲ್ಲಿ ಕ್ಯಾನ್ಸರ್ ಮುಕ್ತರಾಗಿರುವುದಾಗಿ ಬಹಿರಂಗಪಡಿಸಿದ್ದರು. ಆದರೆ ಸೋಮವಾರ ಅನಿರೀಕ್ಷಿತವಾಗಿ ಅವರು ನಿಧನರಾಗಿದ್ದಾರೆ.
“ಅತ್ಯಂತ ದುಃಖದೊಂದಿಗೆ ಸ್ಯಾಮ್ ನೀಲ್ ಅವರ ಅಗಲಿಕೆಯ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಸ್ಯಾಮ್ ಕುಟುಂಬದವರ ಸಮ್ಮುಖದಲ್ಲಿ ಶಾಂತಿಯುತವಾಗಿ ಕೊನೆಯುಸಿರೆಳೆದರು. ಈ ಸಾವು ಹಠಾತ್ ಹಾಗೂ ಅನಿರೀಕ್ಷಿತವಾಗಿದ್ದರೂ ಅವರು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದರು ಎಂಬುದು ಸಮಾಧಾನದ ಸಂಗತಿ” ಎಂದು ಕುಟುಂಬದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1993ರಲ್ಲಿ ಬಿಡುಗಡೆಯಾದ ‘ಜುರಾಸಿಕ್ ಪಾರ್ಕ್’ ಚಿತ್ರದಲ್ಲಿ ಡಾ. ಅಲನ್ ಗ್ರಾಂಟ್ ಪಾತ್ರದ ಮೂಲಕ ಸ್ಯಾಮ್ ನೀಲ್ ಜಾಗತಿಕ ಖ್ಯಾತಿ ಪಡೆದರು. ಅವರು ‘ದಿ ಪಿಯಾನೋ’, ‘ದಿ ಹಂಟ್ ಫಾರ್ ರೆಡ್ ಅಕ್ಟೋಬರ್’, ‘ಪೊಸೆಷನ್’, ‘ಪೀಕಿ ಬ್ಲೈಂಡರ್ಸ್’ ಸೇರಿದಂತೆ ಹಲವು ಸಿನಿಮಾಗಳು ಹಾಗೂ ಸರಣಿಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ್ದರು.
—–





Be the first to comment