‘ಬೇಲ್’ ರಿಲೀಸ್ ಡೇಟ್ ಅನೌನ್ಸ್

ಶಿವರಾಜ್‌ಕುಮಾರ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ‘ಬೇಲ್’ ಸಿನಿಮಾ ಅಕ್ಟೋಬರ್ 2 ರಂದು ತೆರೆಕಾಣಲಿದೆ.

ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಬೇಲ್ ಸಿನಿಮಾ ಬಿಡುಗೆ ದಿನಾಂಕವನ್ನು ಹಂಚಿಕೊಳ್ಳಲಾಗಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ “ಹ್ಯಾಪಿ ಬರ್ತ್‌ಡೇ ಡೇರ್‌ಡೆವಿಲ್” ಎಂಬ ಪೋಸ್ಟರ್ ಹಂಚಿಕೊಂಡಿದ್ದು,  ಬೈಲ್ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ.

ಈ ಹಿಂದೆ ಸಿನಿಮಾ ತಂಡ  ಟೀಸರ್  ಬಿಡುಗಡೆ ಮಾಡಿತ್ತು.  ಸಾಲ್ಟ್ ಪೆಪ್ಪರ್ ಲುಕ್ ಓವರ್‌ನೊಂದಿಗೆ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಶಿವಣ್ಣನ ಕಾಣಿಸಿಕೊಂಡಿದ್ದಾರೆ.  ಶಿವ ರಾಜ್‌ಕುಮಾರ್ ರಗಡ್ ಆದರೆ ಕ್ಲಾಸಿ ಲುಕ್ ಹೊಂದಿದ್ದಾರೆ. ಇದು ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ಶಿವಣ್ಣ ಬೇಲ್ ಸಿನಿಮಾದಲ್ಲಿ ಅವರು ವಿಜಿಯಾಗಿ ನಟಿಸುತ್ತಿದ್ದಾರೆ.  ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ, ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತ, ಸಾಯಿ ಕುಮಾರ್, ಜಯರಾಮ್ ಮತ್ತು ಗೋಪಾಲ ಕೃಷ್ಣ ದೇಶಪಾಂಡೆ  ಚಿತ್ರದಲ್ಲಿದ್ದಾರೆ.

ಬಿ ಅಜನೀಶ್ ಲೋಕನಾಥ್ ಅವರ ಸಂಗೀತ, ವೈದಿ ಅವರ ಛಾಯಾಗ್ರಹಣ, ಗುಣ ಅವರ ನಿರ್ಮಾಣ ವಿನ್ಯಾಸ ಮತ್ತು ಶಶಾಂಕ್ ನಾರಾಯಣ್ ಅವರ ಸಂಕಲನವಿದೆ.

ಶಿವಣ್ಣ ನಟಿಸಿರುವ ಸರ್ವೈವರ್, ಡ್ಯಾಡ್, 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರಗಳು ನಿರ್ಮಾಣ ಹಂತಗಳಲ್ಲಿವೆ. ರಜನಿಕಾಂತ್ ನಟಿಸಿರುವ ಜೈಲರ್ 2 ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!