‘ಕುರುಕ್ಷೇತ್ರ’ ಕತೆಯನ್ನು ಒಂದೇ ಸಾಲಿನಲ್ಲಿ ಹೇಳಿ ಮುಗಿಸಬಹುದು. ಸುಯೋಧನ ಮತ್ತು ಧರ್ಮರಾಯ ಇಬ್ಬರಲ್ಲಿ ಸಿಂಹಾಸನ ಯಾರ ಪಾಲಾಗುತ್ತದೆ? ಸಿಂಹಾಸನಕ್ಕಿಂತ ಕೊಟ್ಟ ಮಾತು ಮುಖ್ಯ ಎನ್ನುವ ಧರ್ಮರಾಯ, ಹೇಗಾದರೂ ಸರಿ ಪಟ್ಟವನ್ನು ಪಡೆಯಬೇಕೆನ್ನುವ ಸುಯೋಧನ. ಇದಕ್ಕಾಗಿ ನಡೆಯುವ ಸಂಚು, ಕುಯುಕ್ತಿ, ಸುಳ್ಳು…ಇದರ ಸುತ್ತ ಕತೆ ಸಾಗುತ್ತದೆ. ಮಹಾಭಾರತ ಕಥೆ ಗೊತ್ತಿದ್ದವರಿಗೇ ಇದರಲ್ಲೇನು ವಿಶೇಷ ಅನ್ನಿಸುವುದಿಲ್ಲ. ಆದರೆ ಪ್ರೇಕ್ಷಕನಿಗೆ ಗೊತ್ತಿರುವ ಕಥೆಯನ್ನೇ, ಟೆಕ್ನಿನಾಲಜಿಯನ್ನು ಬಳಸಿಕೊಂಡು ಅದ್ಭುತವಾಗಿ ತೆರೆ ಮೇಲೆ ತೋರಿಸಿರೋದು ನಿಜಕ್ಕೂ ವಿಶೇಷ. ಒನ್ಸ್ ಅಗೇನ್ ಮುನಿರತ್ನ ಮತ್ತು ಡೈರಕ್ಟರ್ ನಾಗಣ್ಣರ ಕಲ್ಪನಾ ಲೋಕ ಎಲ್ಲರಲ್ಲಿ ಮಹಾ ಅಚ್ಚರಿ ಮೂಡಿಸುತ್ತದೆ.
ದುರ್ಯೋಧನ ಮತ್ತು ಭೀಮನ ನಡುವಿನ ಗದಾ ಯುದ್ಧದಿಂದ ಶುರುವಾಗುವ ‘ಕುರುಕ್ಷೇತ್ರ’ ಸಿನಿಮಾ, ಕೊನೆಗೆ ಅದೇ ಗದಾ ಯುದ್ಧ ಮೂಲಕ ಅಂತ್ಯ ಆಗುತ್ತದೆ. ಮಹಾಭಾರತ ಎಂಬ ಮಹಾ ಕಾವ್ಯವನ್ನು ಅಷ್ಟೇ ಚೆನ್ನಾಗಿ ತೆರೆ ಮೇಲೆ ತರುವಲ್ಲಿ ಚಿತ್ರತಂಡ ಚಿತ್ರತಂಡದ ಶ್ರಮ ಪ್ರತಿ ಫ್ರೇಮ್‍ನಲ್ಲೂ ಕಾಣುತ್ತದೆ. ‘ಕುರುಕ್ಷೇತ್ರ’ ಕದನ ಬಲು ಸೊಗಸಾಗಿದೆ. ಪೌರಾಣಿಕ ಚಿತ್ರವನ್ನು ನೋಡುವವರಿಗೆ ನಿಜಕ್ಕೂ ‘ಕುರುಕ್ಷೇತ್ರ’ ಸಾಕಷ್ಟು ಮನೋರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ.
‘ಮಹಾಭಾರತ’ದ ಪ್ರಮುಖ ಸಂದರ್ಭಗ ಗಳನ್ನು ಒಟ್ಟುಗೋಡಿಸಿ ಅದಕ್ಕೊಂದು ಸುಂದರ ಚೌಕಟ್ಟು ಹಾಕುವಲ್ಲಿ ನಾಗಣ್ಣ ಗೆದ್ದಿದ್ದಾರೆ. ಉದಾಹರಣೆಗೆ, ದುರ್ಯೋಧನ ಮತ್ತು ಭೀಮನ ಗದಾ ಯುದ್ಧ, ಶಕುನಿಯ ಆಗಮನ, ಪಗಡೆ ಆಟ, ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ಧ, ಕೊನೆಗೆ ಅಭಿಮನ್ಯು, ಕರ್ಣ, ದುರ್ಯೋಧನನ ಮರಣ. ಹೀಗೆ ‘ಮಹಾಭಾರತ’ದ ಮುಖ್ಯ ಸಂದರ್ಭಗಳು ‘ಕುರುಕ್ಷೇತ್ರ’ ಚಿತ್ರದ ಪ್ರಮುಖ ಭಾಗಗಳಾಗಿವೆ.
ದುರ್ಯೊಧನನ ಪಾತ್ರ ದರ್ಶನ್ ಕೆರಿಯರ್ ನ ಬೆಸ್ಟ್ ಪಾತ್ರ ಎಂದರೆ ತಪ್ಪಿಲ್ಲ. ದುರ್ಯೋಧನ ಪಾತ್ರ ದರ್ಶನ್ ಕೆರಿಯರ್ ನ ಬೆಸ್ಟ್ ಪಾತ್ರಗಳಲ್ಲಿ ಒಂದಾಗಿದೆ. ತೆರೆ ಮೇಲೆ ದುರ್ಯೋಧನನಾಗಿ ದರ್ಶನ್ ಅವರಿಸಿಕೊಂಡಿರುವ ರೀತಿ ಅದ್ಭುತ. ಒಬ್ಬ ಮಾಸ್ ಹಿರೋ ಪೌರಾಣಿಕ ಪಾತ್ರವೊಂದರ ಮೂಲಕ ಇಡೀ ಚಿತ್ರವನ್ನೇ ಹೆಗಲಲ್ಲಿ ಹೊತ್ತು. ಚಿತ್ರಕ್ಕೆ ನ್ಯಾಯ ಒದಗಿಸೋದು ಸಾಮಾನ್ಯ ಸಂಗತಿಯಲ್ಲ.
ದರ್ಶನ್ ಜೊತೆಯಲ್ಲಿ ಕರ್ಣನಾಗಿ ಅರ್ಜುನ್ ಸರ್ಜಾ, ಶಕುನಿಯಾಗಿ ರವಿಶಂಕರ್, ಬೀಷ್ಮನಾಗಿ ಅಂಬರೀಶ್, ಕೃಷ್ಣನಾಗಿ ರವಿಚಂದ್ರನ್ ಪಾತ್ರಗಳು ಪ್ರೇಕ್ಷಕನ ನಿರೀಕ್ಷೆಯನ್ನು ತಲುಪುವಲ್ಲಿ ಯಶಸ್ವಿಯಾಗಿವೆ.
ಚಿತ್ರದಲ್ಲಿ ಮಹಾಭಾರತವನ್ನು ಕೌರವನ ದೃಷ್ಠಿಯಿಂದ ಹೇಳಿರುವುದರಿಂದ ಸಹಜವಾಗಿಯೇ, ಪಾಂಡವರಿಗಿಂತ ಕೌರವರಿಗೇ ಸ್ಕೋಪ್ ಜಾಸ್ತಿ. ಅರ್ಜುನ ಪಾತ್ರ ಮಾಡಿರುವ ಸೋನು ಸೂದ್ ಅದನ್ನು ಬಳಸಿಕೊಂಡಿಲ್ಲ. ಆ ಪಾತ್ರಕ್ಕೆ ಸೋನು ಸೂದ್ ಬೇಕಾಗರಿಲಿಲ್ಲ ಎಂದನಿಸಿಬಿಡುತ್ತದೆ. ಪಾಂಡವರ ಪಾಳಯದಲ್ಲಿ ಮಿಂಚಿದ್ದು ಅಭಿಮನ್ಯು . ಅಭಿಮನ್ಯುವಾಗಿ ಸ್ಟಂಟ್‍ಗಳಲ್ಲಿ ನಿಖಿಲ್ ಸೂಪರ್. ಆದರೆ ಪೌರಾಣಿಕ ಸಂಭಾಷಣೆಯ ವಿಷಯಕ್ಕೆ ಬಂದರೆ ಸಪ್ಪೆ ಸಪ್ಪೆ. ದ್ರೌಪತಿ ಬಿಟ್ಟರೆ ಬೇರೆ ನಟಿಯರಿಗೆ ಇಲ್ಲಿ ಹೆಚ್ಚು ಕೆಲಸ ಇಲ್ಲ. ಹರಿಪ್ರಿಯಾ ಒಂದು ಸಾಂಗ್‍ಗಾಗಿ ಯಾಕೆ ಬಂದರೋ ಗೊತ್ತಾಗಲಿಲ್ಲ. ಕರ್ಣಣಾಗಿ ಅರ್ಜುನ್ ಸರ್ಜಾ ಬೆಸ್ಟ್‍ಪರ್ಫಾಮೆನ್ಸ್ ನೀಡಿದ್ದಾರೆ. ಕರ್ಣ ಮತ್ತು ಕೌರವರ ನಡುವಿನ ಸ್ನೇಹ ಅದ್ಭುತವಾಗಿ ಮೂಡಿಬಂದಿದೆ. ಸ್ವಾಮಿ ನಿಷ್ಟೆಯನ್ನು ಮೆರದ ಕರ್ಣ ಕೌರವನ್ನಷ್ಟೇ ನೆನಪಿನಲ್ಲಿ ಉಳಿಯುತ್ತಾನೆ.
ಕನ್ನಡದ ಮಟ್ಟಿಗೆ ದೊಡ್ಡ ಪ್ರಯತ್ನ ಕುರುಕ್ಷೇತ್ರ. ಆ ವಿಚಾರದಲ್ಲಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಇಬ್ಬರೂ ಗೆದ್ದಿದ್ದಾರೆ. ಅದ್ದೂರಿ ಸೆಟ್ ಗಳು, ಶ್ರೀಮಂತಿಕೆ ಚಿತ್ರದ ಸೌಂದರ್ಯ ಹೆಚ್ಚಿಸಿದೆ. ಪಾಂಡವ ಮತ್ತು ಕೌರವ ಸಾಮ್ರಾಜ್ಯವನ್ನು ತೆರೆ ಮೇಲೆ ನೋಡಲು ಸೊಗಸಾಗಿದೆ.
ಪೌರಾಣಿಕ ಸಿನಿಮಾ ಬಂದು ಎಷ್ಟೋ ಕಾಲ ಆಗಿದೆ. ಹಾಗಾಗಿ, ಒಂದು ಒಳ್ಳೆಯ ಅನುಭವ ಸಿನಿಮಾ ನೋಡಿದ ಮೇಲೆ ಆಗುತ್ತದೆ. ಒಟ್ಟಿನಲ್ಲಿ ಮಾಸ್ ಹಿರೋ ಡಿಬಾಸ್‍ನ ಬಾಯಲ್ಲಿ ಪೌರಾಣಿಕ ಸಂಭಾಷಣೆಯನ್ನು ಕೇಳುವುದನ್ನು ಮಿಸ್ ಮಾಡ್ಕೋಬೇಡಿ.
Pingback: Regression testing