ದಿವ್ಯಾ ಸುರೇಶ್‌ಗೆ ಕಿರುಕುಳ

‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮಾಜಿ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ಅವರಿಗೆ ಕನಕಪುರ ರಸ್ತೆಯಲ್ಲಿ ತಡರಾತ್ರಿ ಅಪರಿಚಿತ ಯುವಕನೊಬ್ಬ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಭಾನುವಾರ ತಡರಾತ್ರಿ ದಿವ್ಯಾ ಸುರೇಶ್ ತಮ್ಮ ಸಹೋದರಿಯೊಂದಿಗೆ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಯುವಕನೊಬ್ಬ ಅವರನ್ನು ಹಿಂಬಾಲಿಸಿ ಬಂದಿದ್ದಾನೆ. ಬಳಿಕ  ಅಸಭ್ಯವಾಗಿ ವರ್ತಿಸಿ ವಿಕೃತ ಚೇಷ್ಟೆ ತೋರಿದ್ದಾನೆ. ಈ ಕುರಿತು ದಿವ್ಯಾ ಸುರೇಶ್  ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಬೆದರಿದ ದಿವ್ಯಾ ಹಾಗೂ ಅವರ ಸಹೋದರಿ ತಕ್ಷಣವೇ ಕಾರಿನೊಳಗೆ ಆಶ್ರಯ ಪಡೆದಿದ್ದಾರೆ. ಇಬ್ಬರು ಮಹಿಳೆಯರು ಒಂಟಿಯಾಗಿರುವುದನ್ನು ಗಮನಿಸಿ ಆರೋಪಿ ಅಲ್ಲಿಯೇ ನಿಂತು ಕಾರಿನ ಹೊರಗಡೆಯಿಂದಲೂ ಅಸಭ್ಯ ವರ್ತನೆ ಮುಂದುವರಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ. ಯುವಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಆಕ್ರೋಶ ಕಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ವಿಡಿಯೋವನ್ನು ದಿವ್ಯಾ ಸುರೇಶ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದಿವ್ಯಾ ಸುರೇಶ್ ಅವರು ಪೊಲೀಸರಿಗೆ ಯಾವುದೇ ಅಧಿಕೃತ ದೂರು ಸಲ್ಲಿಸಿಲ್ಲ.  ತಮ್ಮ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಕುರಿತ ಆತಂಕವನ್ನು ಮತ್ತೊಮ್ಮೆ ಹೆಚ್ಚಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!