ಟಾಕ್ಸಿಕ್ ಮಹಿಳೆಯರು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ!

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರತಂಡ, ಚಿತ್ರದ ಅಧಿಕೃತ X ಖಾತೆಯಲ್ಲಿ, ‘Where are the ladies? ಯಶ್ ಅವರೇ ಎಂದು ಕೇಳಿ ನಿಗೂಢ ಪೋಸ್ಟ್ ಹಂಚಿಕೊಂಡಿದೆ.

ಈ ಪೋಸ್ಟ್ ಹಂಚಿಕೊಂಡಿರುವ ಯಶ್, ‘ಶಾಂತವಾಗಿರಿ! ಮಹಿಳೆಯರು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ! ಜುಲೈ 1 ರಂದು ಬೆಳಿಗ್ಗೆ 11.33ಕ್ಕೆ ಇದಕ್ಕೆಲ್ಲ ಉತ್ತರ ಸಿಗಲಿದೆ ಎಂದು ಅವರು ಎಂದು ಉತ್ತರಿಸಿದ್ದಾರೆ.

ಪ್ರೇಕ್ಷಕರು ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಅದರ ಮಹಿಳಾ ತಾರಾಗಣದ ಬಗ್ಗೆ  ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಪ್ರತಿಯೊಬ್ಬ ನಾಯಕಿಯರಿಗೂ ಪ್ರತ್ಯೇಕ ಪಾತ್ರ ಪೋಸ್ಟರ್‌ಗಳು ಬಂದಿದ್ದರೂ,  ನಾಯಕಿಯರ ಬಗ್ಗೆ ಅಥವಾ ಕಥೆ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಹಲವು ಬಾರಿ ಚಿತ್ರ ಬಿಡುಗಡೆ ದಿನಾಂಕ ಬದಲಾವಣೆಯ ನಂತರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಆಗಸ್ಟ್ 26 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ ಚಿತ್ರ ಬಿಡುಗಡೆಯಾಗಲಿದೆ.

ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರ  ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್  ಆವೃತ್ತಿ ಬಿಡುಗಡೆಯಾಗಲಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!