ಡೆಡ್ಲಿ ಕಿಲ್ಲರ್

‘ಡೆಡ್ಲಿ ಕಿಲ್ಲರ್’ ಟ್ರೈಲರ್ ಗೆ ರಾಗಿಣಿ ದ್ವಿವೇದಿ ಚಾಲನೆ

ಪೊಲೀಸ್ ಸ್ಟೋರಿ ನಂತರ ಸುಮಾರು 15 ವರ್ಷಗಳಾದ ಮೇಲೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಡೆಡ್ಲಿ ಕಿಲ್ಲರ್. ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ಸಂಭ್ರಮ ಖ್ಯಾತಿಯ ನಟ ಅಭಯ್‌ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಆಕ್ಚನ್, ಸಸ್ಪೆನ್ಸ್, ಥ್ರಿಲ್ಲರ್ ಜತೆ ಹಾರರ್ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರನ್ನು ನಟಿ ರಾಗಿಣಿ ದ್ವಿವೇದಿ ಅವರು ಬಿಡುಗಡೆ ಮಾಡಿದರು. ನಟ ರವಿಚೇತನ್, ವಿಕ್ಟರಿ ವಾಸು, ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಈ ವೇಳೆ ರಾಗಿಣಿ ಮಾತನಾಡುತ್ತ ನಮ್ಮ ಸಿನಿಮಾದವರಿಗೆ 6 ಲಕ್ಕಿ ನಂಬರ್, ಜೂನ್ 6, 2026 ರಂದು ಈ ಚಿತ್ರದ ಟ್ರೈಲರ್ ಲಾಂಚ್ ಮಾಡುವ ಅವಕಾಶ ನನ್ನದಾಗಿದೆ, ನಾನು ಕೂಡ ಹೊಸಬಳಾಗೇ ಚಿತ್ರರಂಗಕ್ಕೆ ಬಂದಿದ್ದೆ. ಥ್ರಿಲ್ಲರ್ ಮಂಜು ಅವರು ನನ್ನ ಮೊದಲ ಸಿನಿಮಾಗೆ ಆಕ್ಷನ್ ಮಾಡಿದವರು. ಅಭಯ್ ನನ್ನ ಕಷ್ಟದ ದಿನಗಳಲ್ಲಿ ನಮ್ಮ ಫ್ಯಾಮಿಲಿ ಜತೆ ನಿಂತಿದ್ದರು, ಹೊಸಬರ ಚಿತ್ರಗಳನ್ನೂ ನೋಡಬೇಕು,ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ಎಂದು ಹೇಳಿದರು.

ನಿರ್ಮಾಪಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಮಾತನಾಡುತ್ತ ಅಭಯ್ ನನ್ನ ಗೆಳೆಯ, ಅವರಿಂದಲೇ ಮಾಸ್ಟರ್ ಪರಿಚಯವಾಗಿ ನಂತರ ಪ್ರೊಡಕ್ಷನ್ ಲೈನ್ ಕಲಿತೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ಡೆಡ್ಲಿ ಕಿಲ್ಲರ್

ನಾಯಕ ಅಭಯವೀರ್ ಮಾತನಾಡಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ವಿನಯ್ ಈಗ ನಮ್ಮ ಜತೆ ಇಲ್ಲ, ಅವರು ಚಿತ್ರದ ಎಲ್ಲ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. 6 ವಿಭಿನ್ನ ಆಕ್ಷನ್ ನಮ್ಮ ಚಿತ್ರದಲ್ಲಿದೆ. ನಾನು ಇಡೀ ಸಿನಿಮಾ ಒಂದೇ ಕಾಸ್ಟೂಮ್‌ನಲ್ಲಿದ್ದೇನೆ, ಥ್ರಿಲ್ಲರ್ ಮಂಜು ಮಾಸ್ಟರ್ ನನ್ನ ನಿಜ ಜೀವನದಲ್ಲೂ ಮಾಸ್ಟರ್ ಆಗಿದ್ದಾರೆ. ನಮ್ಮದು ಉತ್ತರ ಕರ್ನಾಟಕ, ತಂದೆಯವರ ಬ್ಯುಸಿನೆಸ್ ಇದ್ದರೂ ಸಿನಿಮಾನ ಪ್ಯಾಷನ್ ಆಗಿ ತಗೊಂಡಿದೀನಿ. 25 ವರ್ಷದಲ್ಲಿ 8 ಸಿನಿಮಾ ಮಾಡಿದರೂ ಇನ್ನೂ ಸೈಕಲ್ ಹೊಡೀತಿದೀನಿ ಎಂದರು.

ನಾಯಕಿ ನೀವಿಕ್ಷಾ ಮಾತನಾಡಿ ಚಿತ್ರದಲ್ಲಿ ನಾಯಕನ ಪತ್ನಿ, ಗೃಹಿಣಿಯ ಪಾತ್ರ ನಿರ್ವಹಿಸಿದ್ದೇನೆ. ನನ್ನ ಪಾತ್ರಕ್ಕೆ 2 ಶೇಡ್ಸ್ ಇದೆ ಎಂದರು.

ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಅಭಯ್ ಬಹಳ ದಿನಗಳಿಂದ ಗೊತ್ತು, ಒಮ್ಮೆ ಆತನಿಗೆ ಈ ಲೈನ್ ಹೇಳಿದೆ. ಕಥೆ ಇಷ್ಟವಾಗಿ ಅವರೇ ನಿರ್ಮಾಪಕರನ್ನು ಕರೆತಂದರು, ಚಿತ್ರದಲ್ಲಿ ಕಥೆ ಫಾಸ್ಟ್ ಆಗಿ ಸಾಗುತ್ತದೆ, ಅಭಯ್ ಒಳ್ಳೇ ನಟ. ಮುಂದೆ ಅವರು ಸ್ಟಾರ್ ಆಗ್ತಾರೆ. ನಾಯಕಿಯನ್ನು ಸೆಲೆಕ್ಟ್ ಮಾಡಿದಾಗ ಹೇಗೆ ಆ್ಯಕ್ಟ್ ಮಾಡ್ತಾರೋ ಎಂಬ ಆತಂಕ ಇತ್ತು, ಅದ್ಭುತವಾಗಿ ಪಾತ್ರ ನಿರ್ವಹಿಸಿದ್ದಾರೆ, ಸಸ್ಪೆನ್ಸ್ ಥ್ರಿಲ್ಲರ್ ಜತೆ ಅದ್ಭುತವಾದ ನರೇಶನ್ ಈ ಚಿತ್ರದಲ್ಲಿದೆ. ಡೆಡ್ಲಿ ಕಿಲ್ಲರ್ ಒಂದೊಳ್ಳೆ ಸಿನಿಮಾ ಆಗುತ್ತೆ. ಆರು ಜನ ಗ್ಯಾಂಗ್ ಸ್ಟರ್ಸ್ ಕಾಡಿನಲ್ಲಿ ತಪ್ಪಿಸಿಕೊಳ್ತಾರೆ, ಅವರನ್ನು ನಾಯಕ ಹೇಗೆ ಟ್ರ್ಯಾಪ್ ಮಾಡಿ ಹಿಡೀತಾರೆ ಅನ್ನೋದೇ ಈ ಚಿತ್ರದ ಒನ್ ಲೈನ್ ಕಥೆ ಎಂದು ಹೇಳಿದರು.

ಡೆಡ್ಲಿ ಕಿಲ್ಲರ್ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ, ದೀಪು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ 6 ವಿಶಿಷ್ಠವಾದ ಸಾಹಸ ದೃಶ್ಯಗಳಿಗೆ, ನಿರ್ದೇಶಕ ಥ್ರಿಲ್ಲರ್ ಮಂಜು ಅವರೇ ಕಂಪೋಜ್ ಮಾಡಿದ್ದಾರೆ. ವೇದಿಕ್ ವೀರ್ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮಾಡಿದ್ದಾರೆ. ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್, ಪುನೀತ್, ಅಭಿ ಉಳಿದ ಪಾತ್ರಗಳಲ್ಲಿದ್ದಾರೆ. ಸದ್ಯದಲ್ಲೇ ಡೆಡ್ಲಿ ಕಿಲ್ಲರ್ ರಾಜ್ಯಾದ್ಯಂತ ತೆರೆಕಾಣಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!