ರಶ್ಮಿಕಾ ಮಂದಣ್ಣ ಅವರು ‘ಕಾಕ್ಟೇಲ್ 2’ ಚಿತ್ರಕ್ಕಾಗಿ ಅವರ ವೃತ್ತಿ ಜೀವನದಲ್ಲೇ ಅತ್ಯಧಿಕ ಎನ್ನಲಾದ ಸುಮಾರು 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಈ ಚಿತ್ರದಲ್ಲಿ ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿ ಸನೋನ್ , ರಶ್ಮಿಕಾ ಸಮಾನ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಶಾಹಿದ್ ಕಪೂರ್ ಅವರಿಗೆ ಸುಮಾರು 35 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
‘ಛಾವಾ’ ಚಿತ್ರದ ಯಶಸ್ಸಿನ ಬಳಿಕ ರಶ್ಮಿಕಾ ಅವರಿಗೆ ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ಗಳು ಬರುತ್ತಿವೆ. ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿರುವುದರಿಂದ ಅವರ ಬೇಡಿಕೆ ಹೆಚ್ಚಾಗಿದೆ.
‘ಕಾಕ್ಟೇಲ್ 2’ ಸಿನಿಮಾ ಜೂನ್ 19ರಂದು ಬಿಡುಗಡೆ ಆಗಲಿದ್ದು, ಈ ಚಿತ್ರಕ್ಕಾಗಿ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ನಿರ್ಮಾಣವಾಗಿದೆ. ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನವನ್ನು ಕನ್ನಡ ಚಿತ್ರರಂಗದಿಂದ ಆರಂಭಿಸಿ ಈಗ ಬಾಲಿವುಡ್ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಸದ್ಯ ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಪ್ರಾಜೆಕ್ಟ್ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.





Be the first to comment