ತಮಿಳಿನಲ್ಲಿ ಶಿವರಾಜ್​ಕುಮಾರ್ ಗೆ ಭರ್ಜರಿ ಡಿಮ್ಯಾಂಡ್

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಶಿವರಾಜ್‌ಕುಮಾರ್ ಅವರ ಕಾಲ್‌ಶೀಟ್ ಪಡೆಯಲು ತಮಿಳಿನನಿರ್ದೇಶಕರು, ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಶಿವಣ್ಣ ಮತ್ತೊಂದು  ತಮಿಳು ಸಿನಿಮಾವನ್ನು ಒಪ್ಪಿಕೊಂಡಿದ್ದು,  ಚಿತ್ರದ ಮುಹೂರ್ತ ಇಂದು  ನೆರವೇರಿದೆ. ಇದು ತಮಿಳಿನಲ್ಲಿ ಶಿವರಾಜ್‌ಕುಮಾರ್ ಅವರ 4ನೇ ಸಿನಿಮಾವಾಗಲಿದೆ.

‘ಟೂರಿಸ್ಟ್ ಫ್ಯಾಮಿಲಿ’ ಮತ್ತು ‘ವಿತ್ ಲವ್’ ಚಿತ್ರಗಳ ಮೂಲಕ   ಗುರುತಿಸಿಕೊಂಡಿರುವ ನಟ-ನಿರ್ದೇಶಕ ಅಭಿಷನ್ ಜೀವಿಂತ್ ಅವರ ಹೊಸ ಚಿತ್ರವನ್ನು ಗೌತಮ್ ಶಿವರಾಮನ್ ನಿರ್ದೇಶಿಸುತ್ತಿದ್ದಾರೆ. ‘ಡ್ರಾಮಾ ಕಂಪನಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಅಭಿಷನ್,   ಶಿವಣ್ಣ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇವರಿಬ್ಬರು ತಂದೆ-ಮಗನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಶಿವಾನಿ ನಾಗರಂ ಮತ್ತು ಯೋಗ ಲಕ್ಷ್ಮಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ನಟ ಗಾನಾ ವಿನೋದ್   ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಲಿಯೋನ್ ಜೇಮ್ಸ್  ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಶಿವಣ್ಣ  ‘ಜೈಲರ್’ ಬಳಿಕ ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಅಬ್ಬರಿಸಿದ್ದರು.  ‘ಜೈಲರ್ 2’ ನಂತರ ಪ್ರಸ್ತುತ ಅನೌನ್ಸ್ ಆಗಿರುವ ಚಿತ್ರ ಶಿವಣ್ಣ ಅವರ  4ನೇ ತಮಿಳು ಸಿನಿಮಾವಾಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!