ಶೀಘ್ರವೇ ಸುದೀಪ್ ನಿರ್ದೇಶನ

ಸುದೀಪ್  12 ವರ್ಷಗಳ ನಂತರ ಮತ್ತೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.

2014 ರಲ್ಲಿ ಬಿಡುಗಡೆ ಆಗಿದ್ದ ‘ಮಾಣಿಕ್ಯ’ ಸಿನಿಮಾದ ಬಳಿಕ ಸುದೀಪ್  ಸಿನಿಮಾ ನಿರ್ದೇಶಿಸಿಲ್ಲ.  ಅವರು ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದು, ಆ ಸಿನಿಮಾದ ಬಳಿಕ ಸುದೀಪ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರಕತೆ ರಚನೆಯಲ್ಲಿ ಸುದೀಪ್  ತೊಡಗಿಸಿಕೊಂಡಿದ್ದು, ಶೀಘ್ರವೇ ಸಿನಿಮಾದ ಅಧಿಕೃತ ಘೋಷಣೆ  ಮಾಡಲಿದ್ದಾರೆ.

ಸುದೀಪ್ ಕೈಯಲ್ಲಿ ‘ಬಿಲ್ಲಾ ರಂಗ ಭಾಷಾ’ ಸೇರಿ ಒಟ್ಟು ನಾಲ್ಕು ಸಿನಿಮಾಗಳಿವೆ. ಅವುಗಳಲ್ಲಿ ಒಂದನ್ನು ಸುದೀಪ್ ನಿರ್ದೇಶಿಸಲಿದ್ದಾರೆ. ತಮಿಳಿನ ಒಬ್ಬ ಜನಪ್ರಿಯ ನಿರ್ದೇಶಕ   ಸುದೀಪ್ ಅವರಿಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾ ಏಕಕಾಲದಲ್ಲಿ ತಮಿಳು ಮತ್ತು ಕನ್ನಡದಲ್ಲಿ ನಿರ್ಮಾಣಗೊಳ್ಳಲಿದೆ. ಜೊತೆಗೆ ಕೆಆರ್​​ಜಿ ನಿರ್ಮಾಣ ಸಂಸ್ಥೆ ಒಂದು ಸಿನಿಮಾವನ್ನು ಸುದೀಪ್ ಅವರಿಗಾಗಿ ನಿರ್ಮಾಣ ಮಾಡಲಿದೆ.

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಕಳೆದ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಬಳಿಕ ಸುದೀಪ್ ನಟನೆಯ ಇನ್ಯಾವುದೇ ಸಿನಿಮಾ ಬಂದಿಲ್ಲ. ‘ಬಿಲ್ಲಾ ರಂಗ ಭಾಷಾ’ ಸಿನಿಮಾ ವರ್ಷಾಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸುದೀಪ್ ಆರು ಸಿನಿಮಾಗಳನ್ನು  ನಿರ್ದೇಶಿಸಿದ್ದು, ಆರೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!