ಜೂನ್ 19ರಂದು ‘ಜನ ನಾಯಗನ್’ ತೆರೆಗೆ

ತಮಿಳುನಾಡು ಮುಖ್ಯಮಂತ್ರಿ  ವಿಜಯ್ ಅಭಿನಯದ ಕೊನೆಯ ಸಿನಿಮಾ  ‘ಜನ ನಾಯಗನ್’  ಜೂನ್ 19ರಂದು ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

‘ಜನ ನಾಯಗನ್’  ಸಿನಿಮಾ ಈ ವರ್ಷದ ಆರಂಭದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ರಾಜಕೀಯ ಒತ್ತಡಗಳು ಮತ್ತು ಸೆನ್ಸಾರ್ ಸಂಬಂಧಿತ ಪ್ರಕ್ರಿಯೆಗಳ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದೀಗ ಸಿಬಿಎಫ್ಸಿ ಪ್ರಮಾಣಪತ್ರ ಸಿಗುವುದು ಬಹುತೇಕ ಖಚಿತವಾಗಿದೆ. ವಿಜಯ್ ಹುಟ್ಟುಹಬ್ಬಕ್ಕೂ ಮುನ್ನ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ‘ಜನ ನಾಯಗನ್’  ಸಿನಿಮಾ ಸೋರಿಕೆಯಾಗಿದ್ದರೂ ಸಿನಿಮಾ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮೊದಲ ವಾರ ದಿನಕ್ಕೆ ಐದು ಪ್ರದರ್ಶನಗಳಿಗೆ ಅನುಮತಿ ನೀಡಿರುವ ಸರ್ಕಾರದ ನಿರ್ಧಾರ ‘ಜನ ನಾಯಗನ್’  ಸಿನಿಮಾಗೆ ದೊಡ್ಡ ಬಲ ನೀಡಲಿದೆ.

ವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ   ‘ಜನ ನಾಯಗನ್’  ಚಿತ್ರಕ್ಕೆ ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ಸಂಗೀತ ನೀಡಿದ್ದಾರೆ.

ಜೂನ್ 19ರಂದುಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ  ಬಿಡುಗಡೆಗೆ ಸಜ್ಜಾಗಿತ್ತು. ಇದೀಗ ಸಮಂತಾ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!