ತಮಿಳುನಾಡಿನಲ್ಲಿ ಹೊಸ ಸಿನಿಮಾ ದಿನಕ್ಕೆ 5 ಶೋ

ನಟ, ತಮಿಳುನಾಡು ಮುಖ್ಯಮಂತ್ರಿ ವಿಜಯ್  ರಾಜ್ಯದಲ್ಲಿ ಬಿಡುಗಡೆಯಾಗುವ ಹೊಸ ಸಿನಿಮಾಗಳಿಗೆ ಮೊದಲ ವಾರದಲ್ಲಿ ಪ್ರತಿದಿನ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳಿಗೆ  ಅನುಮತಿ ನೀಡಿದ್ದಾರೆ.

ಇತ್ತೀಚೆಗೆ ಚಿತ್ರರಂಗದ ಪ್ರಮುಖರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದರು. ಚಿತ್ರರಂಗ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡ ವಿಜಯ್,  ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ‘ತಮಿಳುನಾಡು ಸಿನಿಮಾ ಥಿಯೇಟರ್ಸ್ ನಿಯಮಾವಳಿ’ಗೆ ತಿದ್ದುಪಡಿ ತರಲಾಗಿದೆ. ಹೊಸ ತಮಿಳು ಸಿನಿಮಾಗಳಿಗೆ ಬಿಡುಗಡೆಯಾದ ದಿನದಿಂದ 7 ದಿನಗಳವರೆಗೆ ದಿನಕ್ಕೆ 5ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಹಬ್ಬ-ಹರಿದಿನಗಳು, ಸಾರ್ವಜನಿಕ ರಜಾದಿನಗಳು ಹಾಗೂ ವಾರಾಂತ್ಯದಲ್ಲೂ ಇದೇ ನಿಯಮ ಅನ್ವಯವಾಗಲಿದೆ.  ಇದರಿಂದ ಚಿತ್ರರಂಗಕ್ಕೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಈ ನಿರ್ಧಾರವನ್ನು ನಟ ವಿಶಾಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.   ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಶಾಲ್, “ಹೊಸ ಸಿನಿಮಾಗಳಿಗೆ ಮೊದಲ 7 ದಿನ  ದಿನಕ್ಕೆ 5 ಶೋಗಳಿಗೆ ಅವಕಾಶ ನೀಡಿರುವುದು ಚಿತ್ರರಂಗಕ್ಕೆ ದೊಡ್ಡ ನೆರವಾಗಿದೆ. ವಿಜಯ್  ಜನಸಾಮಾನ್ಯರ ನಾಯಕ ಹಾಗೂ ಅತ್ಯಂತ ಪ್ರಭಾವಿ ರಾಜಕಾರಣಿ’ ಎಂದು ಎಂದು ವಿಜಯ್ ಅವರನ್ನು ಹೊಗಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!