ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಅವರ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ100 ಕೋಟಿ ರೂಪಾಯಿ ಕ್ಲಬ್ನತ್ತ ಮುನ್ನುಗ್ಗುತ್ತಿದೆ.
ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಎರಡನೇ ದಿನದಲ್ಲೇ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ. ಭಾರತದಲ್ಲಿ ಈ ಸಿನಿಮಾ ಎರಡನೇ ದಿನ 11.05 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದ ಗ್ರಾಸ್ ಕಲೆಕ್ಷನ್ 31.18 ಕೋಟಿ ರೂಪಾಯಿ ಆಗಿದೆ.
ವಿದೇಶದಲ್ಲಿ ಈ ಸಿನಿಮಾ ಎರಡನೇ ದಿನ 20 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಎರಡೇ ದಿನಕ್ಕೆ ‘ದೃಶ್ಯಂ 3’ ವಿಶ್ವಾದ್ಯಂತ ಬರೋಬ್ಬರಿ 76.18 ಕೋಟಿ ಗ್ರೋಸ್ ಕಲೆಕ್ಷನ್ ಮಾಡಿ 100 ಕೋಟಿ ಕ್ಲಬ್ನತ್ತ ಮುನ್ನುಗ್ಗುತ್ತಿದೆ.
ನಿರ್ದೇಶಕ ಜೀತು ಜೋಸೆಫ್ ಅವರ ಡೈರೆಕ್ಷನ್ ಬ್ರಿಲಿಯನ್ಸ್ ಎದ್ದು ಕಾಣುತ್ತಿದೆ. ಪ್ರೇಕ್ಷಕರು ಊಹಿಸದ ಟ್ವಿಸ್ಟ್ ಹಾಗೂ ಟರ್ನ್ಗಳನ್ನು ನೀಡುತ್ತಾ, ಚಿತ್ರದ ಕೊನೆಯವರೆಗೂ ಸೀಟಿನ ತುದಿಗೆ ತಂದು ನಿಲ್ಲಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಜಾರ್ಜ್ಕುಟ್ಟಿ ಪಾತ್ರಕ್ಕೆ ಜೀವ ತುಂಬಿರುವ ಮೋಹನ್ಲಾಲ್ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಅವರ ಕಣ್ಣಿನಲ್ಲೇ ಕಥೆ ಹೇಳುವ ತಂತ್ರ, ಮುಖದ ಹಾವಭಾವ, ಮೌನದಲ್ಲೇ ಗಂಭೀರತೆ ಮೂಡಿಸುವ ನಟನೆ ಚಿತ್ರದ ತೂಕ ಹೆಚ್ಚಿಸಿದೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ‘ದೃಶ್ಯಂ’ ಸರಣಿ ಮೂರನೇ ಭಾಗದಲ್ಲೂ ಯಶಸ್ಸನ್ನು ಮುಂದುವರಿಸಿದೆ. ವೀಕೆಂಡ್ನಲ್ಲಿ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.





Be the first to comment