ಗರುಡ

ಎಐ ಆಧಾರಿತ ‘ಗರುಡ’ ಚಿತ್ರದ ಟ್ರೈಲರ್ ಬಿಡುಗಡೆ

ಇತ್ತೀಚಿನ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಎಐ ತಂತ್ರಜ್ಞಾನ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ, ಮುಂದಿನ ಕಾಲಘಟ್ಟದಲ್ಲಿ ಅದು ಜನರ ಮತ್ತು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ, ಅದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯುಕ್ತವಾಗುತ್ತಾ ಎಂಬ ಕಂಟೆಂಟ್ ಆಧರಿಸಿ ತಯಾರಾಗಿರುವ ಚಿತ್ರ ಗರುಡ. ಶೈವಂ ಫಿಲಂಸ್ ಮೂಲಕ ಕಿರಣ್ ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜತೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಚಿತ್ರದ ನಾಯಕ, ನಾಯಕಿ ಸೇರಿದಂತೆ ಎಲ್ಲರೂ ಹಾಜರಿದ್ದು ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಂಡರು, ನಿರ್ದೇಶಕ ಕಿರಣ್ ಮಾತನಾಡುತ್ತ ಇದೊಂದು ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. 2024ರಲ್ಲಿ ಪೈಲಟ್ ಸಿನಿಮಾ ಮಾಡಲೆಂದು ಹೊರಟಿದ್ದೆವು. ಅದೇ ಈಗ ಗರುಡ ಆಗಿದೆ.

ಇದೊಂದು ಫಿಕ್ಷನಲ್, ನಾನ್ ಲೀನಿಯರ್ ಚಿತ್ರ. 4 ಕಥೆಗಳು ಬೇರೆ ಬೇರೆಯಾಗಿ ಸಾಗುತ್ತ ಒಂದು ಹಂತದಲ್ಲಿ ಸೇರುತ್ತದೆ. ಕೆಲ ಸಿನಿಮಾಗಳು ತನಗೆ ತಾನೇ ಆಗುತ್ತವೆ. ಅದೇರೀತಿ ಆದಂಥ ಚಿತ್ರವಿದು. ನಾಯಕ ಮಾಡಬೇಕೆಂದು ಹೊರಟ ಪ್ರಾಜೆಕ್ಟ್ ಹೆಸರೇ ಗರುಡ, ಎಲ್ಲ ಅಡೆ ತಡೆಗಳನ್ನೂ ಮೀರಿ ಆತ ಹೇಗೆ ಸಾಧನೆ ಮಾಡುತ್ತಾನೆ ಎಂದು ಚಿತ್ರದಲ್ಲಿ ಹೇಳಿದ್ದೇವೆ. 30-40 % ಎಐ ಮೇಲೆ ನಡೆದರೆ, ಉಳಿದೆಲ್ಲ ಡ್ರಾಮಾ ಆಗಿರುತ್ತದೆ. ಬೆಂಗಳೂರು ಸುತ್ತಮುತ್ತ. 45 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ ಎಂದರು.‌

ಗರುಡ

ನಾಯಕ ರೀತ್ವಾನ್ ಶ್ರೀನಿವಾಸ್ ಮಾತನಾಡಿ ಈ ಹಿಂದೆ ಒಂದಷ್ಟು ಸೀರಿಯಲ್‌ನಲ್ಲಿ ನಟಿಸಿದ್ದೆ. ಎಲ್ಲ ಟೆಕ್ನಾಲಜಿಗೆ ಹಿನ್ನೆಲೆಯೇ ನಾನಾಗಿರುತ್ತೇನೆ. ಇಡೀ ಕಥೆಯನ್ನು ಕ್ಯಾರಿ ಮಾಡುವ ಪಾತ್ರ ಎಂದು ಹೇಳಿದರು.

ಮತ್ತೊಬ್ಬ ನಟ ಸೌರವ್ ಪ್ರಶಾಂತ್ ಮಾತನಾಡಿ ಹಲವು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದೇನೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಚಿತ್ರ. ನನ್ನದು ವಿಶೇಷವಾಗಿ ವಿಲನ್ ಕಮ್ ಹೀರೋ ಥರದ ಪಾತ್ರ ಎಂದು ಹೇಳಿದರು.

ನಂತರ ನಾಯಕಿ ದಿವ್ಯಾಚಂದ್ರ ಮಾತನಾಡಿ ಅಪೂರ್ವ ಎಂಬ ಹುಡುಗಿ. ನನ್ನದು ಆರಂಭದಿಂದ ಎಂಡ್ ವರೆಗೆ ಇರುವಂಥ ಮುಖ್ಯಪಾತ್ರ. ಈ ಹಿಂದೆ ನಮೋ ಭೂತಾತ್ಮ-೨ ಚಿತ್ರದಲ್ಲಿ ಅಭಿನಯಿಸಿದ್ದೆ ಎಂದರು‌.

ವಿವೇಕ್ ಮಾತನಾಡುತ್ತ ಇಂಥ ಉತ್ತಮ ಚಿತ್ರದಲ್ಲಿ ನನಗೂ ಪಾತ್ರ ಮಾಡಲು ಅವಕಾಶ ಸಿಕ್ಕಿದ್ದು ಖುಷಿಯಾಗಿದೆ ಎಂದರು. ನಂತರ ಅಭಿಮಹೇಶ್, ಅಭಿಷೇಕ್, ಕಿರಣ್ ಚಿತ್ರದ ಕುರಿತಂತೆ ಹೇಳಿದರು.

ಗರುಡ ಚಿತ್ರದ ಸಂಗೀತ ನಿರ್ದೇಶಕರಾಗಿ ಸಂತೋಷ್ ಜೋಶ್ವಾ ಕೆಲಸ ಮಾಡಿದ್ದಾರೆ. ವಿನಯ್ ಪ್ರಭಾಕರ್, ವಿಲ್ ಫ್ರೆಡ್ ವಿವೇಕ್, ಸೌಭಾಗ್ಯಹಂದ್ರಾಳ್, ದಿಲೀಪ್ ಕುಮಾರ್, ಬಾಹುಬಲಿ ಮಂಜು ಚಿತ್ರದ ಉಳಿದ ಪಾತ್ರವರ್ಗದಲ್ಲಿದ್ದಾರೆ. ಜೂನ್ ತಿಂಗಳಲ್ಲಿ ಗರುಡ ಚಿತ್ರವು ಬೆಳ್ಳಿಪರದೆಯ ಮೇಲೆ ಬರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!