ಬಾಲಿವುಡ್ ಹಾಗೂ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಅಭಿನಯ ತರಬೇತುದಾರ ರಚಿತ್ ಸಿಂಗ್ ಜೊತೆ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿರುವ ಹುಮಾ ಈ ವರ್ಷದ ಅಂತ್ಯಕ್ಕೆ ಮದುವೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ವೇಳೆಗೆ ಮದುವೆ ಆಗಲು ಪ್ಲ್ಯಾನ್ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಜೋಡಿಯ ವಿವಾಹ ಸರಳವಾಗಿ ನಡೆಯಲಿದ್ದು, ಕುಟುಂಬದವರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡುವ ಯೋಜನೆ ರೂಪಿಸಲಾಗಿದೆ. ಬಳಿಕ ಮುಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಷನ್ ಆಯೋಜನೆ ಮಾಡುವ ಸಾಧ್ಯತೆ ಇದೆ.
ಇತ್ತೀಚೆಗೆ ಈ ಜೋಡಿ ಸೋನಾಕ್ಷಿ ಸಿನ್ಹಾ ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳ ಬಾಯಿಗೆ ಸುದ್ದಿಯಾಗಿದ್ದಾರೆ.
ಸದ್ಯ ಹುಮಾ ಯಶ್ ನಟನೆಯ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಅವರ ಪಾತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
__





Be the first to comment