ಚುನಾವಣೆಯಲ್ಲಿ ಗೆದ್ದ ವಿಜಯ್

ಕೊನೆಯ ಸಿನಿಮಾ ‘ ಜನ ನಾಯಗನ್ ‘ ಮೂಲಕ ರಾಜಕೀಯ ಲಾಭ ಪಡೆಯಲು ವಿಫಲ ಆದರೂ ತಮಿಳು ನಟ ವಿಜಯ್ ಅವರ ಪಕ್ಷ ತಮಿಳುನಾಡು ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ವಿಜಯ್ ಮೊದಲ ಯತ್ನದಲ್ಲಿ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ.

ಇಂದು ತಮಿಳುನಾಡು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ವಿಜಯ್ ಅವರ ಟಿವಿಕೆ ಸರ್ಕಾರ ರಚಿಸಲಿದೆ ಎಂದು ಪಕ್ಷದ ನಾಯಕ ಫೆಲಿಕ್ಸ್ ಜೆರಾಲ್ಡ್ ಘೋಷಿಸಿದ್ದಾರೆ.

ಟಿವಿಕೆ 105 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಡಿಎಂಕೆ 50 ಹಾಗೂ ಎಐಎಡಿಎಂಕೆ ಮೈತ್ರಿಕೂಟ 77 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರೆ ಪಕ್ಷಗಳು 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ.

ವಿಜಯ್ ಅವರ ಪಣಯೂರ್ ನಿವಾಸದ ಬಳಿ ಅಭಿಮಾನಿಗಳ ಜಮಾವಣೆ ಕಂಡು ಬಂದಿದೆ. ಟ್ರಾಫಿಕ್ ಜಾಮ್ ಸಾಧ್ಯತೆ ಹಿನ್ನೆಲೆ ಭದ್ರತೆ ಕಠಿಣಗೊಳಿಸಲಾಗಿದೆ.

ವಿಜಯ್ ಅಭಿಮಾನಿಗಳು “ ವಿಜಯ್ ಮುಂದಿನ ಮುಖ್ಯಮಂತ್ರಿ” ಎಂದು ಘೋಷಣೆ ಕೂಗಿದ್ದಾರೆ.

234 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಸರಕಾರ ರಚಿಸಲು ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಟಿವಿಕೆ ಸಧ್ಯ ಅತೀ ಹೆಚ್ಚು ಸ್ಥಾನ ಪಡೆದಿರುವ ಪಕ್ಷ ಆಗಿ ಹೊರಹೊಮ್ಮಿದೆ.

ಕೆವಿನ್ ಪ್ರೊಡಕ್ಷನ್ ಅವರ ‘ ಜನ ನಾಯಗನ್ ‘ ಚಿತ್ರ ಚುನಾವಣೆ ಮುನ್ನ ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದ ಬಿಡುಗಡೆ ಇನ್ನೂ ಆಗಿಲ್ಲ. ಈ ಚಿತ್ರದ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ವಿಜಯ್ ತಂತ್ರ ವಿಫಲ ಆಗಿತ್ತು. ಆದರೂ ಸಿನಿಮಾ ನಟ ರಾಜಕೀಯದಲ್ಲಿ ಯಶಸ್ಸು ಕಾಣುವಲ್ಲಿ ಸಫಲ ಆಗಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!