‘ಉಸ್ತಾದ್ ಭಗತ್ ಸಿಂಗ್’ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಟ್ಟಿದೆ.

ರಾಜಕೀಯ ಕಾರಣಗಳಿಂದ ಕೆಲ ವರ್ಷಗಳ ಕಾಲ ನಿಂತಿದ್ದ ಈ ಸಿನಿಮಾ ಮತ್ತೆ ಶೂಟಿಂಗ್ ಪೂರ್ಣಗೊಳಿಸಿ ಬಿಡುಗಡೆಯಾಯಿತು. ಮಾರ್ಚ್ 19ರಂದು ಬಿಡುಗಡೆಯಾದ ಈ ಸಿನಿಮಾ, ಧುರಂಧರ್ 2 ಜೊತೆಗೆ ಕ್ಲ್ಯಾಶ್ ಆಗಿದ್ದು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಗಳಿಕೆ ಮಾಡಲು ಸಾಧ್ಯ ಆಗಲಿಲ್ಲ.

ಚಿತ್ರದಲ್ಲಿ ಶ್ರೀಲೀಲಾ ಮತ್ತು ರಾಶಿ ಖನ್ನಾ ನಾಯಕಿಯರಾಗಿ ನಟಿಸಿದ್ದು, ಆರ್ ಪಾರ್ಥಿಬನ್, ಕೆ.ಎಸ್. ರವಿಕುಮಾರ್, ನವಾಬ್ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಹರೀಶ್ ಶಂಕರ್ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರ ವಿಂಟೇಜ್ ಹಾಡುಗಳು ಮತ್ತು ಹಳೆಯ ಸಿನಿಮಾಗಳ ರೆಫರೆನ್ಸ್‌ಗಳನ್ನು ಬಳಸಿ ಅಭಿಮಾನಿಗಳಿಗೆ ವಿಶೇಷ ಟ್ರೀಟ್ ನೀಡಿದ್ದಾರೆ. ಇದರಿಂದ ಸಿನಿಮಾ ಫ್ಯಾನ್ಸ್‌ಗೆ ಹೆಚ್ಚು ಕನೆಕ್ಟ್ ಆಗಿ ಸಾಧಾರಣ ಗಳಿಕೆ ಕಂಡಿದೆ.

ರಾಜಕೀಯದಲ್ಲಿ ಬಿಜಿ ಆಗಿರುವ ಪವನ್ ಕಲ್ಯಾಣ್ ಓಜಿ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!