ಅರೆನಗ್ನ ವಿಡಿಯೋ ಚಂದಾದಾರಿಕೆ ಮಾಡಿದ ಆಂಕರ್!

ಟಾಲಿವುಡ್ ಆಂಕರ್ ವಿಷ್ಣು ಪ್ರಿಯಾ ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂದು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಂದಾದಾರಿಕೆ ಎಂಬ ಆಯ್ಕೆಯನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಲಾಯಿತು. ನಾಯಕಿಯರು, ಮಹಿಳಾ ಪ್ರಭಾವಿಗಳ ಹಾಟ್ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಲು ಬಯಸಿದರೆ ರೂ. 399 ಪಾವತಿಸಬೇಕಾಗುತ್ತದೆ. ಇತ್ತೀಚೆಗೆ ವಿಷ್ಣುಪ್ರಿಯಾ ತಮ್ಮ ಚಂದಾದಾರರಿಗೆ ಹಾಟ್ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿದೆ.

ವಿಷ್ಣುಪ್ರಿಯ ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ದೂರಿನ ಬಳಿಕ ಅವರ ಚಂದಾದಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ.ಎರಡು ದಿನಗಳ ಹಿಂದೆ ಸುಮಾರು 1,800 ಚಂದಾದಾರರನ್ನು ಹೊಂದಿದ್ದು ಪ್ರಕರಣದ ನಂತರ ಆ ಸಂಖ್ಯೆ ಸುಮಾರು 5,000ಕ್ಕೆ ಏರಿಕೆಯಾಗಿ ಅವರ ಚಂದಾದಾರರ ಸಂಖ್ಯೆ ಬಹಳ ಏರಿಕೆ ಆಗಿದೆ.

ವಿಜಯವಾಡ ಸೈಬರ್ ಕ್ರೈಮ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುವ ಅಸಭ್ಯ ಫೋಟೋಗಳು ಮತ್ತು ಅರೆನಗ್ನ ವೀಡಿಯೊಗಳ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ.

ಮಾಧ್ಯಮಗಳು ಈ ವಿಷಯದ ಬಗ್ಗೆ ವಿಷ್ಣು ಪ್ರಿಯಾ ಅವರನ್ನು ಪ್ರಶ್ನಿಸಲು ಮುಂದಾದರು. ಈ ವೇಳೆ ಅವರು ತಮ್ಮ ಮುಖವನ್ನು ಮುಚ್ಚಿಕೊಂಡು ಅಲ್ಲಿಂದ ಹೊರಟು ಹೋದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!