‘ಉದ್ಯಮಿಯನ್ನು ಮದುವೆಯಾಗಿದ್ದೇನೆ’ ಎಂದ ತ್ರಿಶಾ

‘ನಾನು ಸಿನಿಮಾ ರಂಗ ತೊರೆದಿದ್ದೇನೆ. ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದೇನೆ’ ಎಂದು ನಟಿ ತ್ರಿಶಾ ಕೃಷ್ಣನ್ ವದಂತಿಗಳಿಂದ ಬೇಸತ್ತು ಬರೆದುಕೊಂಡಿದ್ದಾರೆ.

ತ್ರಿಶಾ  ಬಗ್ಗೆ ದಿನಕ್ಕೊಂದರಂತೆ ವದಂತಿಗಳು ಕೇಳಿ ಬರುತ್ತಲೇ ಇವೆ. ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕೆಲವು ದಿನಗಳ ನಂತರ ವಿಜಯ್ ಅವರ ಜೊತೆ ವಿವಾಹ ಆರತಕ್ಷತೆಯಲ್ಲಿ ಕಾಣಿಸಿಕೊಂಡಾಗಿನಿಂದ ತ್ರಿಶಾ  ಸುದ್ದಿಯಲ್ಲಿದ್ದಾರೆ. ತ್ರಿಶಾ ನಟನೆಗೆ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಬರಲಿದ್ದಾರೆ. ಅವರು ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ತ್ರಿಶಾ ತಮ್ಮ ಕುರಿತಾಗಿ  ವದಂತಿಗಳು ಕೇಳಿ ಬರುತ್ತಿರುವುದರ ಹೊರತಾಗಿಯೂ ಆಪ್ತರೊಂದಿಗೆ ಸುತ್ತಾಟ,  ಪಾರ್ಟಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾ ವದಂತಿಗಳಿಂದ ಬೇಸತ್ತು ಈ ಸಂಬಂಧ ಇನ್​ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದಾರೆ.

‘ನಾನು ಸಿನಿಮಾ ರಂಗ  ತೊರೆದಿದ್ದೇನೆ, ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದೇನೆ. ನಿನ್ನೆ ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ.ಇನ್ನೇನಾದರೂ ಸೇರಿಸಬೇಕೇ ಅಥವಾ ಇಂದಿನ ಕಾದಂಬರಿಯ ಕೋಟಾ ಸಾಕೆ?’ ಎಂದು ಬರೆದುಕೊಂಡಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!