ಇತ್ತೀಚೆಗೆ ಮದುವೆಯಾದ ದಕ್ಷಿಣ ಭಾರತದ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರು ವಿವಾಹದ ನಂತರ ಮೊದಲ ಬಾರಿಗೆ ಕೊಡಗಿಗೆ ಭೇಟಿ ನೀಡಿದ್ದಾರೆ.
ಏಪ್ರಿಲ್ 5 ರಂದು ರಶ್ಮಿಕಾ ಅವರ 30ನೇ ಹುಟ್ಟು ಹಬ್ಬದ ಅಂಗವಾಗಿ ನೂತನ ದಂಪತಿಗಳು ಕೊಡಗಿನ ಆರಾಧ್ಯದೈವ ಪಾಡಿ ಇಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರು ಗಮನ ಸೆಳೆದರು.
ಏಪ್ರಿಲ್ 6 ರಂದು ವಿರಾಜಪೇಟೆಯ ಸೆರೆನಿಟಿ ಕನ್ವೆನ್ಷನ್ ಹಾಲ್ ನಲ್ಲಿ ನೂತನ ದಂಪತಿಗಳ ಅದ್ದೂರಿ ಔತಣಕೂಟ ನಡೆಯಿತು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಸಾಂಪ್ರದಾಯಿಕ ಕೊಡವ ಶೈಲಿಯ ರೇಷ್ಮೆ ಸೀರೆಯಲ್ಲಿ ಮಿಂಚಿದರು. ವಿಜಯ ದೇವರಕೊಂಡ ಅವರು ಕಪ್ಪು ಭ್ಲೇಸರ್ ಧರಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ವಿಜಯ್ ಅವರು ಕೊಡವ ಭಾಷೆಯಲ್ಲಿ ಮಾತನಾಡುವ ಮೂಲಕ ಗಣ್ಯರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದೇ ಸಂದರ್ಭದಲ್ಲಿ ಮಗಳ ಹುಟ್ಟು ಹಬ್ಬದ ಪ್ರಯುಕ್ತ ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ತಮ್ಮ ಮಗಳಿಗೆ ವಿರಾಜಪೇಟೆಯಲ್ಲಿ ಅತ್ಯಾಧುನಿಕ ಸೌಕರ್ಯ ಇರುವ ಸೆರೆನಿಟಿ ಕನ್ವೆನ್ಷನ್ ಹಾಲ್ ನ್ನು ಉಡುಗೊರೆ ನೀಡಿದರು. ಇದರ ಉದ್ಘಾಟನೆ ನೆರವೇರಿತು.
ಮದುವೆ ನಂತರ ಮೊದಲ ಬಾರಿಗೆ ಕೊಡಗಿಗೆ ಬೇಟಿ ನೀಡಿರುವ ರಶ್ಮಿಕಾ ಮಂದಣ್ಣ ದಂಪತಿಗಳ ಆಗಮನ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.





Be the first to comment