ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದ ‘ಸಂಗೀತ ಬಾರ್ ಮತ್ತು ರೆಸ್ಟೋರೆಂಟ್’ ಚಿತ್ರೀಕರಣ ಪೂರ್ಣಗೊಂಡಿದೆ.
ಚಿತ್ರದಲ್ಲಿ ಕೋಮಲ್ ಕುಮಾರ್, ಮೇಘನಾ ರಾಜ್ ಸರ್ಜಾ, ಅನುಷಾ ರೈ ನಟಿಸಿದ್ದಾರೆ. ಚಿತ್ರ ಎರಡು ಸಮಾನಾಂತರ ಕಥಾಹಂದರಗಳ ನಡುವೆ ಸಾಗುತ್ತದೆ. ‘ಸಂಗೀತ ಬಾರ್ ಮತ್ತು ರೆಸ್ಟೋರೆಂಟ್’ ಕನ್ನಡ, ಮಲಯಾಳಂ ಮತ್ತು ಹಿಂದಿಯ ಮಿಶ್ರಣವಾಗಿದೆ.
‘ಪಾತ್ರಗಳು ನೈಜವಾಗಿ ಬರುತ್ತವೆ.ತಿ ಪಾತ್ರವನ್ನು ನಿಜ ಜೀವನದಲ್ಲಿ ಅವರು ಮಾತನಾಡುವ ರೀತಿಯಲ್ಲಿ ಮಾತನಾಡಲು ಅವಕಾಶ ನೀಡಿದ್ದೇನೆ. ಭಾಷೆಯು ಒಬ್ಬ ವ್ಯಕ್ತಿಯೊಂದಿಗೆ ನಿಕಟ ಸಂಬಂಧ ಹೊಂದಿರುತ್ತದೆ’ ಎಂದು ಸಂದೇಶ್ ಶೆಟ್ಟಿ ಅಜ್ರಿ ಹೇಳಿದ್ದಾರೆ.
19 ನೇ ಶತಮಾನದ ಸಲಾಮ್ ಸುಲ್ತಾನ್ ಪಾತ್ರದಲ್ಲಿ ಅಜ್ರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಟ್ಟಾರೇ ಸ್ಟೋರಿಗೆ ಐತಿಹಾಸಿಕ ಸ್ಪರ್ಶ ನೀಡುತ್ತದೆ ಎಂದು ಸಂದೇಶ್ ಶೆಟ್ಟಿ ಅಜ್ರಿ ಹೇಳುತ್ತಾರೆ.
ಸಂದೇಶ್ ಶೆಟ್ಟಿ ಅಜ್ರಿ ಈ ಚಿತ್ರದಲ್ಲಿ ನಟನೆ ಜೊತೆಗೆ ಅವರೇ ನಿರ್ದೇಶಕರಾಗಿದ್ದಾರೆ. ರಂಗಭೂಮಿಯಲ್ಲಿ ಕೆಲಸ ಆರಂಭಿಸಿದ ಅವರು ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ನಂತರ ಅವರು ‘ಕತ್ತಲೆ ಕೋಣೆ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಹಿಂದಿ, ಮರಾಠಿ ಮತ್ತು ಮಲಯಾಳಂ ಇಂಡಸ್ಟ್ರಿಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
‘ಕನ್ನಡದಲ್ಲಿ ಇನಾಂದಾರ್, ಗುಮ್ಟಿಯಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಸಂಗೀತ ಬಾರ್ ಮತ್ತು ರೆಸ್ಟೋರೆಂಟ್ನೊಂದಿಗೆ ಹೊಸ ಅನುಭವ ಹೇಳಲು ಹೊರಟಿದ್ದೇನೆ. ಚಿತ್ರದಲ್ಲಿ ಕಥೆ ಭಾಗವಾಗಿ ಬಹುಭಾಷೆಗಳನ್ನು ಬಳಸಿಕೊಂಡಿದ್ದೇನೆ. ಪರಿಚಿತ ಕಥೆ ಹೇಳುವ ವಿಧಾನಗಳಿಂದ ದೂರವಿರಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
—-





Be the first to comment