‘ರಾಮಾಯಣ’ ಟೀಸರ್ ಔಟ್

ಬಹು ನಿರೀಕ್ಷಿತ  ಸಿನಿಮಾ ‘ರಾಮಾಯಣ’ದ ಟೀಸರ್ ಇಂದು ಹನುಮ ಜಯಂತಿ ವಿಶೇಷವಾಗಿ ಬಿಡುಗಡೆಗೊಂಡಿದ್ದುಅದ್ಧೂರಿ ದೃಶ್ಯ ವೈಭವ ಗಮನ ಸೆಳೆದಿದೆ.

2 ನಿಮಿಷ 38 ಸೆಕೆಂಡುಗಳ ಟೀಸರ್‌ನ ಪ್ರತಿ ಫ್ರೇಮ್‌ನಲ್ಲೂ ಆಧುನಿಕ ತಂತ್ರಜ್ಞಾನದ ಝಲಕ್  ಗೋಚರಿಸುತ್ತಿದೆ. ಟೀಸರ್‌ನಲ್ಲಿ ಶ್ರೀರಾಮನ ಪಾತ್ರ  ಹೈಲೈಟ್ ಮಾಡಲಾಗಿದೆ. ಬಾಲಕಾಂಡ ಮತ್ತು ಅರಣ್ಯಕಾಂಡದ ಭಾಗಗಳನ್ನು ಒಳಗೊಂಡಿರುವ ದೃಶ್ಯಗಳಲ್ಲಿ ರಾಮನ ಪಟ್ಟಾಭಿಷೇಕಕ್ಕೂ ಮುಂಚಿನ ಘಟನೆಗಳು, ವನವಾಸ ಮತ್ತು ಅರಣ್ಯ ಸಾಹಸಗಳು ಮೂಡಿ ಬಂದಿವೆ. ವಿಚಿತ್ರ ಜೀವಿಗಳೊಂದಿಗೆ ನಡೆಯುವ ಯುದ್ಧದ ದೃಶ್ಯ ಗಮನ ಸೆಳೆಯುತ್ತದೆ.

ರಣ್ಬೀರ್ ಕಪೂರ್ ಅವರು ಶ್ರೀರಾಮನಾಗಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.  ಆದರೆ ಸೀತಾ, ಲಕ್ಷ್ಮಣ ಸೇರಿದಂತೆ ಇತರ ಪ್ರಮುಖ ಪಾತ್ರಗಳನ್ನು ಟೀಸರ್‌ನಲ್ಲಿ ರಹಸ್ಯವಾಗಿ ಇಡಲಾಗಿದೆ.

ಟೀಸರ್‌ನ ಕೊನೆಯಲ್ಲಿ ಯಶ್ ಅಭಿನಯದ ರಾವಣನ ಪಾತ್ರದ ಝಲಕ್ ಸಿಗುತ್ತದೆ. ಅದನ್ನು ಸಂಪೂರ್ಣವಾಗಿ ಬಹಿರಂಗಪಡಿಸದೆ ಕುತೂಹಲ ಉಳಿಸಲಾಗಿದೆ.   ಪುಷ್ಪಕ ವಿಮಾನದ ದೃಶ್ಯ  ಪ್ರೇಕ್ಷಕರ ಗಮನ ಸೆಳೆಯುತ್ತದೆ.

ನಮಿತ್ ಮಲ್ಹೋತ್ರಾ ನಿರ್ಮಾಣ ಮತ್ತು ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರ ಇದೇ ವರ್ಷದ ದೀಪಾವಳಿಗೆ ಬಿಡುಗಡೆಯಾಗಲಿದೆ. ಇದರ ಎರಡನೇ ಭಾಗ ಮುಂದಿನ ದೀಪಾವಳಿಗೆ ತೆರೆಗೆ ಬರಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!