ಇನ್ನು ಮುಂದೆ ತೆಲುಗು ಸಿನಿಮಾಗಳನ್ನು ಮಾಡುವುದಿಲ್ಲ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಎಲ್ಲ ಕೆಲಸಗಳನ್ನು ಮರೆತು ಧುರಂಧರ್ ನಂತರದ ಹೊಸ ಕಾಲಘಟ್ಟಕ್ಕೆ ತಕ್ಕಂತೆ ಹೊಸ ನಿರ್ದೇಶಕರಂತೆ ಮತ್ತೆ ಪ್ರಾರಂಭಿಸಲು ಬಯಸುತ್ತೇನೆ. ಇನ್ನು ಮುಂದೆ ತೆಲುಗು ಚಿತ್ರರಂಗದಿಂದ ದೂರ ಉಳಿಯಲಿದ್ದು, ಇದೇ ಕಾರಣಕ್ಕಾಗಿ ಹೈದರಾಬಾದ್ನಿಂದ ಮುಂಬೈಗೆ ವಾಸ್ತವ್ಯ ಬದಲಾಯಿಸಿರುವುದಾಗಿ ವರ್ಮಾ ತಿಳಿಸಿದ್ದಾರೆ.
”ಅತಿರಂಜಿತ ಆಕ್ಷನ್ ಮತ್ತು ಅತಿಯಾದ ಹೀರೋಯಿಸಂ ಆಧಾರಿತ ಸಿನಿಮಾಗಳ ಕಾಲ ಮುಗಿದಿದೆ. ಪ್ರೇಕ್ಷಕರು ನೈಜತೆಗೆ ಹತ್ತಿರವಾದ ಕಥನಗಳನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ತಾವು ಈ ಹಿಂದೆ ನಿರ್ದೇಶಿಸಿದ ‘ಗಾಡ್ ಫಾದರ್’ ತರಹದ ಸಿನಿಮಾಗಳು ಈಗಿನ ಹೊಸ ತಲೆಮಾರಿನ ಸಿನೆಮಾಗಳ ಮುಂದೆ ಮಂಕಾಗಿ ಕಾಣಿಸುತ್ತವೆ. ಹಿಂದಿನ ಎಲ್ಲ ಕೆಲಸಗಳನ್ನು ಮರೆತು ಧುರಂಧರ್ ನಂತರದ ಹೊಸ ಕಾಲಘಟ್ಟಕ್ಕೆ ತಕ್ಕಂತೆ ಹೊಸ ನಿರ್ದೇಶನ ಮತ್ತೆ ಪ್ರಾರಂಭಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ರಾಮ್ ಗೋಪಾಲ್ ವರ್ಮಾ ‘ಸಿಂಡಿಕೇಟ್’ ಎಂಬ ಹೊಸ ಚಿತ್ರವನ್ನು ರೂಪಿಸುವ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಜಾಗತಿಕ ಮಟ್ಟದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಹಿಂದಿ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲು ಅವರು ನಿರ್ಧರಿಸಿದ್ದಾರೆ.
—-





Be the first to comment