ಮಹಾತ್ವಾಕಾಂಕ್ಷಿ ಮಹಾಂತೇಶ್

ರಂಗಭೂಮಿಯನ್ನೇ ಕರ್ಮಭೂಮಿಯನ್ನಾಗಿಸಿಕೊಂಡಿದ್ದ ಹುಡುಗನೊಬ್ಬ, ಬಣ್ಣದ ಲೋಕದ ಸೆಳೆತದಿಂದ ಗಾಂಧಿನಂಗರಕ್ಕೆ ಕಾಲಿಟ್ಟು, ‘ಜರ್ಕ್’ ಎಂಬ ಚಿತ್ರ ನಿರ್ದೇಶಿಸಿ ಅದನ್ನು ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿರೋದು ಖಂಡಿತಾ ಸಮಾನ್ಯ ಸಂಗತಿಯಲ್ಲ. ಅದೂ ‘ಬೆಂಗಳೂರು ಮೆಟ್ರೋ’ದಲ್ಲಿ ಕೆಲಸ ನಿರ್ವಹಿಸುತ್ತಲೇ! ಹೌದು, ನಾವು ಹೇಳಲು ಹೊಟರಟೊರೋದು ‘ಜರ್ಕ್’ ಚಿತ್ರದ ನಿರ್ದೇಶಕ ಮಹಾಂತೇಶ್ ಮದಕರಿಯವರ ಬಗ್ಗೆ. ದೂರದ ದಾವಣೆಗೆರೆಯಿಂದ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟು ತಮ್ಮದೇ ತಂಡಕಟ್ಟಿಕೊಂಡು ಒಂದು ಅಪರೂಪದ ಚಿತ್ರ ಕೊಡುವ ಪ್ರಯತ್ನ ಮಾಡಿದ್ದಾರೆ ಮದಕರಿ. ‘ಜರ್ಕ್’ ಪದವನ್ನು ಗೂಗ್ಲಿಸಿದರೆ ‘ಎಳೆತ’ ಎಂಬ ಅರ್ಥ ಸಿಗುತ್ತದೆ. ಸೋ, ಬಣ್ಣಲೋಕದ ಸೆಳತದಿಂದ ‘ಎಳೆತ’ ಎಂಬ ಟೈಟಲ್ ನಿಕ್ಕಿ ಮಾಡಿರಬೇಕು ಮಹಾಂತೇಶ್.

‘ಜರ್ಕ್’ ಸಿನ್ಮಾ ಆರಂಭವಾಗಿದ್ದೇ ಮದಕರಿಯವರ ‘ಮನಸ್ಸಿದ್ದರೆ ಮಾರ್ಗ’ ಎಂಬುದನ್ನು ಬಲವಾಗಿ ನಂಬಿದ್ದರಿಂದಲೇ ಇರಬೇಕು. ಬಿಕಾಸ್, ಹೊಟ್ಟೆಪಾಡಿಗಾಗಿ, ಕುಟುಂಬದ ಪೋಷಣೆಗಾಗಿ ಬೆಟ್ಟದಷ್ಟಿದ್ದ ಕನಸನ್ನು ಅದುಮಿಟ್ಟುಕೊಳ್ಳಬೇಕಾಗಿತ್ತು. ಆದರೆ, ಮಹಾತ್ವಾಕಾಂಕ್ಷಿ ಮಹಾಂತೇಶ್ ತನ್ನ ಕನಸನ್ನು ಅಲ್ಲಿಗೇ ಬಿಡದೇ, ತಾನು ಕೆಲಸ ನಿರ್ವಹಿಸುತ್ತಿದ್ದ ಮೆಟ್ರೋದಲ್ಲಿಯೇ ಚಿತ್ರ ಚಿತ್ರಿಸುವ ನಿರ್ಧಾರ ತೆಗೆದುಕೊಂಡರು. ತೆಗೆದುಕೊಂಡ ನಿರ್ದಾರವನ್ನು, ತನ್ನ ಆಶಯವನ್ನು ಮೆಟ್ರೋ ಅಧಿಕಾರಿಗಳ ಮುಂದಿಟ್ಟಾಗ, ಅವರ ಅಸ್ತು ಅಂದರು. ಮಹಾಂತೇಶ್‍ಗೆ ಒಂದೇ ಏಟಿಗೆ ಎರಡೆರಡು ದಾವಣೆಗೆರೆ ಬೆಣ್ಣೆದೋಸೆ ತಿಂದ ಸಂತಸ!
ಹೀಗೆ, ಬಹುತೇಕ ಬೆಂಗಳೂರು ಮೆಟ್ರೋದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದ ತಯಾರಿಸಿದ ‘ಜರ್ಕ್‌’ ಕನ್ನಡ ಚಲನಚಿತ್ರ ಜು.26ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ.

ತಮ್ಮ ಮೊದಲ ಚಿತ್ರದಲ್ಲಿಯೇ, ಮನುಷ್ಯನ ಜೀವನದ ತಿರುವುಗಳ ಬಗ್ಗೆ ಸ್ಪಷ್ಟ ಸಂದೇಶ ತಿಳಿಸುವುದರ ಜೊತೆಗೆ ಪ್ರೇಕ್ಷಕರಿಗೆ ಕೊನೆಯವರೆಗೂ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದ್ದಾರೆ ಮಹಾಂತೇಶ್. ಬೇರೊಂದು ಊರಿನಿಂದ ಕೆಎಎಸ್‌ ತರಬೇತಿಗೆ ಬೆಂಗಳೂರಿಗೆ ಬರುವ ಹುಡುಗನಿಗೆ ಇಲ್ಲಿ ಆಗುವ ಅನುಭಗಳ ಪರಿಕಲ್ಪನೆಯ ಸುತ್ತ ಜರ್ಕ್‌ ಚಿತ್ರದ ಕಥೆ ಹೆಣೆಯಲಾಗಿದ್ದು, ಕಮರ್ಷಿಯಲ್‌ ಅಂಶಗಳ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಚಿತ್ರ ಇದಾಗಲಿದೆ ಎಂಬುದು ನಿರ್ದೇಶಕರ ನಿರೀಕ್ಷೆ.
ಮಯೂರ್‌ ಪ್ರೋಡಕ್ಷನ್‌ ಬ್ಯಾನರ್ ಅಡಿಯಲ್ಲಿ, ರವಿ ಕೆ. ಮತ್ತು ಸೌಭಾಗ್ಯಮ್ಮ ನಿರ್ಮಿಸಿದ ಜರ್ಕ್‌ ಚಿತ್ರ ಬೆಂಗಳೂರು, ದೇವರಾಯನ ದುರ್ಗ ಹಾಗೂ ಕುಲು ಮನಾಲಿಯಂಥ ಸುಂದರ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರದ ನಾಯಕ ನಟರಾಗಿ ಬೀದರ್‌ ಮೂಲದ ಕೃಷ್ಣರಾಜ್‌ ಮತ್ತು ಸಚ್ಚಿನ್‌ ಸಿದ್ದು ಅಭಿನಯಿಸಿದ್ದು, ನಿತ್ಯಾರಾಜ್‌ ಹಾಗೂ ಆಶಾ ಭಂಡಾರಿ ನಾಯಕಿಯರಾಗಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ತಿಥಿ ಚಿತ್ರದ ಖ್ಯಾತಿಯ ಗಡ್ಡಪ್ಪ ಹಾಗೂ ಅವರ ಸ್ನೇಹಿತನಾಗಿ ಮಜಾಟಾಕೀಸ್‌ನ ಪವನ್‌ ನಟಿಸಿದ್ದಾರೆ. ನೆಲೆಮನೆ ರಾಘವೇಂದ್ರ, ಪಾಲ್ಸ್‌ ನಾಗ ಅವರ ಸಾಹಿತ್ಯವಿರುವ ನಾಲ್ಕು ಹಾಡುಗಳಿಗೆ ಎಡ್ವರ್ಡ್‌ ಷಾ ಸಂಗೀತ ಸಂಯೋಜನೆ ಮಾಡಿದ್ದಾರೆ.
‘ಬಿಗಿನಿಂಗ್ ರಾಕ್, ಎಂಡಿಂಗ್ ಶಾಕ್’ ಎಂಬ ಟ್ಯಾಗ್‍ಲೈನ್‍ನೊಂದಿಗೆ
ವಿಶೇಷ ಆ್ಯಕ್ಷನ್‌ ಹಾಗೂ ಸಸ್ಪೆನ್ಸ್‌ ಕಥೆ ಒಳಗೊಂಡಿರುವ ಜರ್ಕ್‌ ಚಿತ್ರ ಬಿಡಗಡೆಯಾಗಿ, ಮೊದಲಬಾರಿಗೆ ಡೈರೆಕ್ಟರ್ ಆಗಿರುವ ಮಹಾಂತೇಶ್ ಅವರ ಮಂದಿನ ಮಹಾತ್ವಾಕಾಂಕ್ಷೆಯ ಚಿತ್ರಗಳಿಗೆ ಮಟ್ಟಿಲಾಗುತ್ತಾ ಕಾದು ನೋಡಬೇಕು.

Be the first to comment

Leave a Reply

Your email address will not be published. Required fields are marked *

Translate »
error: Content is protected !!