‘ಎಎಂಬಿ ಸಿನಿಮಾಸ್’ ವಿಶೇಷ ಕೊಡುಗೆ

ಎಎಂಬಿ ಸಿನಿಮಾಸ್ ಬೆಂಗಳೂರಿನ ಚಲನಚಿತ್ರ ಪ್ರೇಮಿಗಳಿಗೆ ಲವ್ ಮಾಕ್ಟೇಲ್ 3, ಧುರಂಧರ್ 2 ,  ಉಸ್ತಾದ್ ಭಗತ್ ಸಿಂಗ್ ಚಿತ್ರಗಳಿಗೆ ಮಾರ್ಚ್ 26 ರವರೆಗೆ  ವಿಶೇಷ ಯುಗಾದಿ ಕೊಡುಗೆಗಳನ್ನು ಘೋಷಿಸಿದೆ.

ಬೆಳಗ್ಗೆ 11 ಗಂಟೆಯೊಳಗಿನ ಪ್ರದರ್ಶನಗಳಿಗೆ ಟಿಕೆಟ್ ಕಾಯ್ದಿರಿಸುವ ಪ್ರೇಕ್ಷಕರಿಗೆ ಉಚಿತ ಪಾಪ್‌ಕಾರ್ನ್ ಮತ್ತು ಉಡುಗೊರೆಗಳನ್ನು ನೀಡಲಾಗುತ್ತಿದೆ. ಅಲ್ಲದೆ ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸುವ ಗ್ರಾಹಕರು ‘AMB100’ ಕೋಡ್ ಬಳಸುವ ಮೂಲಕ ಇಲ್ಲಿ 100 ರೂ. ರಿಯಾಯಿತಿ ಪಡೆಯಬಹುದು.

ಎಎಂಬಿ ಸಿನಿಮಾಸ್  ಮೊದಲ ಬಾರಿಗೆ ‘ಡಾಲ್ಬಿ ಸಿನಿಮಾ’ ಮಾದರಿಯನ್ನು ಪರಿಚಯಿಸಿದೆ. ಇದು ಅತ್ಯಂತ ಸ್ಪಷ್ಟವಾದ ದೃಶ್ಯ ವೈಭವ, ಅದ್ಭುತ ಕಾಂಟ್ರಾಸ್ಟ್ ಮತ್ತು ಸ್ಪಷ್ಟ ಧ್ವನಿ ವ್ಯವಸ್ಥೆಯನ್ನು ಹೊಂದಿದ್ದು, ಪ್ರೇಕ್ಷಕರಿಗೆ ಸಿನಿಮೀಯ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ.

ಎಎಂಬಿ ಸಿನಿಮಾಸ್ ಅತ್ಯಾಧುನಿಕ ಪ್ರೊಜೆಕ್ಷನ್ ತಂತ್ರಜ್ಞಾನ, ಸುಧಾರಿತ ಧ್ವನಿ ವ್ಯವಸ್ಥೆ,  ಐಷಾರಾಮಿ ಆಸನಗಳೊಂದಿಗೆ ‘7-ಸ್ಟಾರ್’ ಅನುಭವವನ್ನು ನೀಡುತ್ತದೆ. ಐಷಾರಾಮಿ ಸೌಲಭ್ಯವಿದ್ದರೂ  ಟಿಕೆಟ್ ದರಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ.  ಅಲ್ಲದೆ ಇಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಾಜಾವಾಗಿ ತಯಾರಿಸಿ ನೀಡಲಾಗುತ್ತದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!