ಕನ್ನಡದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡುವ ಸಾಧ್ಯತೆ ಹೆಚ್ಚಿದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ 2023ರಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಈಗ ಚಿತ್ರ ತಮಿಳು ಚಿತ್ರರಂಗದ ಗಮನ ಸೆಳೆದಿದೆ. ನಟ ಶಿವಕಾರ್ತಿಕೇಯನ್ ಈ ಚಿತ್ರದ ರೀಮೇಕ್ ಹಕ್ಕುಗಳತ್ತ ಆಸಕ್ತಿ ತೋರಿದ್ದಾರೆ.
ಶಿವಕಾರ್ತಿಕೇಯನ್ ತಮ್ಮ ‘ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅವರು ಸಿನಿಮಾದಲ್ಲಿ ನಟಿಸಲಿದ್ದಾರೆಯೇ ಅಥವಾ ಕೇವಲ ನಿರ್ಮಾಪಕರಾಗಿಯೇ ಉಳಿಯಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಒಂದೇ ರಾತ್ರಿಯಲ್ಲಿ ನಡೆಯುವ ಕಥಾಹಂದರ, ವಿಭಿನ್ನ ಮೇಕಿಂಗ್ ಮತ್ತು ಹಾಸ್ಯ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿತ್ತು. ರಿಷಬ್ ಶೆಟ್ಟಿ, ಪವನ್ ಕುಮಾರ್ ಹಾಗೂ ದಿಗಂತ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಮೆರಗು ತಂದಿತ್ತು. ಈ ಚಿತ್ರ ನಟಿ ರಮ್ಯಾ ನೀಡಿದ ದೂರಿನ ಕಾರಣಕ್ಕೂ ಹೆಚ್ಚುವರಿ ಪ್ರಚಾರ ಪಡೆದಿತ್ತು.
ತಮಿಳಿನಲ್ಲಿ ಈ ಚಿತ್ರವನ್ನು ಹೊಸ ಪ್ರತಿಭೆಗಳೊಂದಿಗೆ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ. ಯುವಕರಿಗೆ ಹತ್ತಿರವಾಗುವ ಕಥಾಹಂದರದಿಂದಾಗಿ ಚಿತ್ರ ದೊಡ್ಡ ಮಟ್ಟದ ರೀಚ್ ಪಡೆಯುವ ಸಾಧ್ಯತೆ ಇದೆ.
—–





Be the first to comment