ಬಿ ಸಿನಿಮಾಸ್ : ಸ್ವಲ್ಪ ಕ್ಲಾಸ್.,ಇನ್ನು ಸ್ವಲ್ಪ ಮಾಸ್ ಟೋಟಲಿ ಫಸ್ಟ್ ಕ್ಲಾಸ್ ಪಾಸ್..

 

ಸರಿಯಾಗಿ ಒಂದು ವರ್ಷದ ಹಿಂದೆ ಆರಂಭಿಸಿದಂಥ ಸಿನಿ ಸುದ್ದಿ ಮಾಧ್ಯಮ ನಮ್ಮ ಬಿ ಸಿನಿಮಾಸ್. ಹೆಸರು ನೋಡಿದಾಕ್ಷಣ ಎಲ್ಲರೂ ಕೇಳೋರು ಅದೇನು ಬಿ ಅಂದರೆ ಭೀಮರಾಯ್ ಸಿನಿಮಾಸ್ ಅಂತಾನ ಎಂದು. ಹೆಸರು ಇಡುವಾಗ ಕನ್ನಡ ಸಿನಿಮಾಗಳಿಗೆ ಪ್ರಾಮುಖ್ಯತೆ ಕೊಡುವ ಸುದ್ದಿ ಮಾಡಬೇಕು ಎನ್ನುವ ಉದ್ದೇಶದಿಂದ ‘ಬಿಗ್ ಸಿನಿಮಾಸ್ ‘ ಎನ್ನುವ ಹೆಸರಿಟ್ಟಿದ್ದೆ. ಆದರೆ ಸಿನಿ ಪ್ರಿಯರಿಗೆ ತುಂಬಾ ದೊಡ್ಡ ಹೆಸರು ಆಗುತ್ತೆ ಎನ್ನುವ ಕಾರಣಕ್ಕೆ ‘ಬಿ ಸಿನಿಮಾಸ್ ‘ ಮಾಡಿಕೊಂಡೆ ಹಾಗೆ ಇದರಲ್ಲಿ ಸಂಪಾದಕೀಯದಿಂದ ಹಿಡಿದು ಸುದ್ದಿ ಬರೆಯುವ ತನಕ ಎಲ್ಲ ಕೆಲಸಗಳನ್ನು ಕೂಡ ನಾನೇ ಮಾಡುವ ಕಾರಣ ಇದು ಭೀಮರಾಯ ಸಿನಿಮಾಸ್ ಕೂಡ  ಅನ್ನಬಹುದು. ಹಾಗಂತ ಇಲ್ಲಿ ನಾನು ನೌಕರರನ್ನು ಇಟ್ಟುಕೊಳ್ಳದಿದ್ದರೂ, ನಮ್ಮ ಸಂಸ್ಥೆಗೆ ಫ್ರೀಲೇನ್ಸ್ ಆಗಿ ಬರೆಯುವವರಿಗೆ ಕೊರತೆ ಇಲ್ಲ. ಒಂದು ವರ್ಷದಲ್ಲಿ ಮಾರುಕಟ್ಟೆಯಲ್ಲಿ ಒಂದಷ್ಟು ಹವಾ ಕ್ರಿಯೇಟ್ ಮಾಡಿದ್ದರೆ ಅದಕ್ಕೆ ಅಂಥ ಆಕರ್ಷಕ ಬರಹಗಾರರು ಕೂಡ ಕಾರಣ.

ಸ್ವಂತಕ್ಕೊಂದು ಉದ್ಯೋಗ ಇರಬೇಕು ಎನ್ನುವ ಕನಸು ಶುರುವಾಗಿದ್ದೇ ರವಿ ಬೆಳಗೆರೆಯವರ ಮಾತು ಕೇಳಿದ ಮೇಲೆ. ಯಾಕೆಂದರೆ ಅದು ದಶಕದ ಹಿಂದೆ ಅವರದೇ ಹಾಯ್ ಬೆಂಗಳೂರ್ ಸಂಸ್ಥೆಯ ಮೂಲಕ ಮಾಧ್ಯಮರಂಗಕ್ಕೆ ಕಾಲಿಟ್ಟವನು ನಾನು. ಅಲ್ಲಿಂದ ಇಲ್ಲಿಯವರೆಗೆ ಮಾಧ್ಯಮಕ್ಷೇತ್ರದ ಹಲವರ ಜತೆಗೆ ಕೆಲಸ ಮಾಡಿದ್ದೇನೆ. ಆದರೆ ಸ್ವ ಉದ್ಯೋಗದ ಮಾದರಿಯ ರವಿ ಬೆಳಗೆರೆಯವರ ಕಲ್ಪನೆ ಮನದಲ್ಲೇ ಇತ್ತು. ಕಳೆದ ವರ್ಷ ‘ಬಿ ಸಿನಿಮಾಸ್’ ಮೂಲಕ ಅದು ಸಾಕಾರವಾಯಿತು.

ಇದು ಸಿನಿಮಾಗಳ ಕುರಿತಾದ ಜಾಲತಾಣವಾದರೂ, ಸಿನಿಮಾ ಸುದ್ದಿ, ವಿಮರ್ಶೆಗಳ ಜತೆಗೆ ಸಿನಿಮಾ ಮಂದಿಯ ಕುರಿತಾದ ಬರಹಗಳು ಇಲ್ಲಿ ನಿಮಗೆ ಧಾರಾಳವಾಗಿ ದೊರಕುತ್ತವೆ. ನಮ್ಮ ಕಾನೂನು, ನ್ಯಾಯ, ಧರ್ಮಗಳು ನಮಗೆ ಕಲಿಸಿಕೊಟ್ಟ ಸಿದ್ಧಾಂತದ ಪ್ರಕಾರ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ತೀರ್ಮನಿಸಬಲ್ಲ ಮನೋಧರ್ಮ ನನಗೆ ಸಿದ್ಧಿಸಿದೆ. ಅದನ್ನು ಬಳಸಿಕೊಂಡು ನಾನು ಸಿನಿಮಾಗಳ ಬಗ್ಗೆ ನನ್ನ ಅಭಿಪ್ರಾಯ ಹೇಳುತ್ತೇನೆ. ಅದರಿಂದ ನೋವು, ಅಥವಾ ಕೋಪ ಮಾಡಿಕೊಂಡು ಉಪಯೋಗವೇನಿಲ್ಲ. ಮುಂದಿನ ಚಿತ್ರಕ್ಕಾಗುವಾಗಲಾದರೂ ಸಿನಿಮ ತಯಾರಿಕೆಯ ಕುರಿತಾದ ಸರಿಯಾದ ರೀತಿ ನೀತಿಗಳನ್ನು ಅರಿತು ಮುಂದುವರಿದರೆ ಚಿತ್ರೋದ್ಯಮಕೆ ಉತ್ತಮ. ಅದರ ಹೊರತು ನಮಗೆ ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ.

ಜಾಹೀರಾತುಗಳ ವಿಚಾರಕ್ಕೆ ಬಂದರೆ ನಾನು ಲಕ್ಕಿ ಎಂದೇ ಹೇಳಬೇಕು. ಒಂದೇ ವರ್ಷದಲ್ಲಿ ಲಾಭ ಗಳಿಸುವ ಮಟ್ಟಕ್ಕೆ ಜಾಹೀರಾತುಗಳು ದೊರಕುತ್ತಿವೆ. ಅದಕ್ಕೆ ಅಲ್ಪ ಸಮಯದಲ್ಲೇ ಆರು ಲಕ್ಷ ಓದುಗರನ್ನು ಪಡೆದಿರುವುದು ಕೂಡ ಕಾರಣವಿರಬಹುದು. ಇನ್ನು ಮಾಧ್ಯಮ ಸಂಪರ್ಕಕ್ಕೆ ಹೆಸರಾಗಿರುವ ನನ್ನ ಆತ್ಮೀಯ
ಪಿ ಆರ್ ಓಗಳಾದ ನಾಗೇಂದ್ರ, ಸುುಧೀಂದ್ರ ವೆಂಕಟೇಶ್, ವಿಜಯ ಕುಮಾರ್, ಕಲ್ಲೇಶಿ ,ಮತ್ತು ಬಾಬು ಅವರ ಸಹಕಾರವನ್ನು ಕೂಡ ಮರೆಯುವಂತಿಲ್ಲ.

ಎಲ್ಲೂ ಓದಿರದ ಸಿನಿಮಾ ಬರಹಗಳನ್ನು ಮುಂದೆಯೂ ನಾವೇ ಪ್ರೆಶ್ಶಾಗಿ ನಿಮ್ಮೆದುರು ತಂದಿಡುತ್ತೇವೆ.
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

This Article Has 1 Comment
  1. Pingback: Devops solutions

Leave a Reply

Your email address will not be published. Required fields are marked *

Translate »
error: Content is protected !!