ಚಿತ್ರಮಂದಿರಗಳಲ್ಲಿ ಎಲ್ಲರ ಮನೆ ಮಾತಾಗಿದ್ದ ಆಕ್ಷನ್ ಡ್ರಾಮಾ “ಲ್ಯಾಂಡ್ ಲಾರ್ಡ್” ಇದೇ ಮಾರ್ಚ್ 19ಕ್ಕೆ ಜೀ5ನಲ್ಲಿ ಬಿಡುಗಡೆ ಆಗಲಿದೆ.
ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸಾರಥಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ.
ಈ ಚಿತ್ರದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಿಥನ್ಯಾ ವಿಜಯ್, ಉಮಾಶ್ರೀ, ಭಾವನಾ ರಾವ್, ಸಂಪತ್ ಮೈತ್ರೇಯ ಮುಂತಾದವರು ನಟಿಸಿರುತ್ತಾರೆ. ಇಂತಹ ಒಂದು ಬಹುತಾರಾಗಣವನ್ನು ಹೊಂದಿರುವ ಚಿತ್ರ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಜೀ5ನಲ್ಲಿ ಬಿಡುಗಡೆ ಆಗುತ್ತಿದೆ.
ಚಿತ್ರದಲ್ಲಿ ತನ್ನ ಪಾತ್ರದ ಕುರಿತು ಮಾತನಾಡಿದ ನಟ ದುನಿಯಾ ವಿಜಯ್, “ನಾನು ರಾಚಯ್ಯ ಎಂಬ ಪಾತ್ರವನ್ನು ವಹಿಸಿದ್ದೇನೆ. ರಾಚಯ್ಯನು ಒಬ್ಬ ಅಂತರ್ಮುಖಿ. ಹೆಚ್ಚು ಮಾತನಾಡದೇ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುವ ಈ ಪಾತ್ರ ನನಗೆ ಒಂದು ಸವಾಲಾಗಿತ್ತು. ಇದೀಗ ಈ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ. ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ.”
ಚಿತ್ರದ ಬಗ್ಗೆ ಹಾಗೂ ತನ್ನ ಪಾತ್ರದ ಕುರಿತು ಮಾತನಾಡಿದ ನಟಿ ರಚಿತಾ ರಾಮ್, “ಚಿತ್ರವು ಸರಳವಾಗಿದ್ದರೂ, ಕಥೆಯಲ್ಲಿರುವ ಭಾವನೆಗಳು ಆಳವಾಗಿವೆ. ಅಗಾಧವಾದ ಭಾವನೆಗಳನ್ನು ವ್ಯಕ್ತಪಡಿಸುವ ಕಥೆಯೇ “ಲ್ಯಾಂಡ್ ಲಾರ್ಡ್”. ಇದರಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ.”
ಜೀ5 ಕಿರುಪರಿಚಯ:
ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.





Be the first to comment