ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಯುದ್ಧಭೀತಿ

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇರಾನಿನ ಡ್ರೋನ್ ದಾಳಿಯ ಕಾರಣದಿಂದ ಭೀತಿ ಉಂಟಾಗಿದೆ.

ಆಸ್ಕರ್ ಪ್ರಶಸ್ತಿ ಸಮಾರಂಭ ಮಾರ್ಚ್ 15ರಂದು ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಕ್ಯಾಲಿಫೋರ್ನಿಯಾ ಕಾನೂನು ಜಾರಿ ಸಂಸ್ಥೆಗಳಿಗೆ ಯುಎಸ್ ಪಶ್ಚಿಮ ಕರಾವಳಿಯನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ಡ್ರೋನ್ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಎಫ್‌ಬಿಐ ಎಚ್ಚರಿಕೆ ನೀಡಿದೆ. ಹೀಗಾಗಿ ಸಮಾರಂಭಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ನಿರ್ಮಾಪಕ ರಾಜ್ ಕಪೂರ್ ಪತ್ರಿಕಾಗೋಷ್ಠಿಯಲ್ಲಿ ‘ನಾವು ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುತ್ತೇವೆ. ಸಮಾರಂಭ ನಿಗದಿಯಂತೆ ನಡೆಯುತ್ತದೆ’ ಎಂದು ಹೇಳಿದ್ದಾರೆ.

ಆಸ್ಕರ್ ಸಮಾರಂಭಕ್ಕೆ ಯುದ್ಧದ ಕಾರಣದಿಂದ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ಹಾಸ್ಯನಟ ಕಾನನ್ ಒ’ಬ್ರೇನ್ ಸಮಾರಂಭವನ್ನು ಆಯೋಜಿಸಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ನಟರಾದ ಆರ್ನೆಟ್, ರಾಬರ್ಟ್ ಡೌನಿ ಜೂನಿಯರ್, ಆನ್ ಹ್ಯಾಥ್ವೇ ಮತ್ತು ಪಾಲ್ ಮೆಸ್ಕಲ್ ಇರಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!