ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಯಾಕೆ ಎನ್ನುವ ಬಗ್ಗೆ ರಶ್ಮಿಕಾ ತಾಯಿ ಉತ್ತರ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಸಂಚಲನ ಮೂಡಿಸಿದೆ.
‘ಆವತ್ತು ಒಂದಿನ ಮಿಡ್ ನೈಟ್ 2 ಗಂಟೆಗೆ ರಶ್ಮಿಕಾ ಸಿನಿಮಾ ಕುರಿತ ಇಂಟರ್ವ್ಯೂ ಮುಗಿದಿದೆ. ನೀನು ಕಾರು ತಗೊಂಡು ಬಾ ನನ್ನನ್ನ ನೋಡೋಕೆ ಅಂತ ಹೇಳ್ತಿದ್ದರು. ಇವರು ಮನುಷ್ಯರಾ? ಮಧ್ಯ ರಾತ್ರಿ ರೋಡ್‌ನಲ್ಲಿ ನನ್ನ ಮಗಳಿಗೆ ಏನಾದರೂ ತೊಂದರೆಯಾದ್ರೆ ಯಾರು ಹೊಣೆ? ಆಗ ರಶ್ಮಿಕಾ ಹೇಳಿದ್ಲು ನಾನು ಬರೋದಕ್ಕೆ ಆಗಲ್ಲ. ನನಗೆ ಇವತ್ತಿನ ದಿನ ಇಂಟರ್ವ್ಯೂ ತುಂಬಾ ಇಂಪಾರ್ಟೆಂಟ್ ಅಂತ” ಎಂದು ಆಡಿಯೋದಲ್ಲಿ ಹೇಳಲಾಗಿದೆ.
ನೀನು ಎಲ್ಲವನ್ನೂ ಬಿಟ್ಟು ಬಂದು ಟ್ವೀಟ್ ಮಾಡಬೇಕು, ನೀನು ಇನ್ಮುಂದೆ ಯಾವ ಸಿನಿಮಾನೂ ಮಾಡಲ್ಲ ಅಂತ ಹೇಳ್ಬೇಕು ಅಂತ ರಶ್ಮಿಕಾಗೆ ಹೇಳಿದ್ರು. ಅವರ ಅಮ್ಮ ಬಂದು ನಿನ್ನ ಅಮ್ಮ ನನಗೆ ಸಾರಿ ಕೇಳ್ಬೇಕು ಅಂತ ಹೇಳಿದ್ರು. ಹುಡುಗ ಹುಡುಗಿಯನ್ನ ಒಂದು ಮಾಡೋದಾ? ಅಥವಾ ಅವರನ್ನ ದೂರ ಮಾಡೋದಾ? ಸಂಬಂಧ ಒಡೆದದ್ದು ನನ್ನ ಪುಣ್ಯ, ಅದು ಬೇರೆ ವಿಷಯ” ಎಂದು ರಕ್ಷಿತ್ ಶೆಟ್ಟಿಯ ತಾಯಿ ಬಗ್ಗೆಯೂ ರಶ್ಮಿಕಾ ತಾಯಿ ಆವೇಶದ ಮಾತುಗಳನ್ನಾಡಿದ್ದಾರೆ.
ಈ ಆಡಿಯೋ ಕುರಿತು ಸುಮನ್ ಮಂದಣ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಶ್ಮಿಕಾ, ರಕ್ಷಿತ್ ಯಾರೂ ಪ್ರತಿಕ್ರಿಯೆ ನೀಡಿಲ್ಲ.
_





Be the first to comment