ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ

“ದಿ ಗರ್ಲ್‌ಫ್ರೆಂಡ್” ಚಿತ್ರದ ಅಭಿನಯಕ್ಕಾಗಿ ರಶ್ಮಿಕಾ ಮಂದಣ್ಣ ಅವರಿಗೆ ತೆಲಂಗಾಣ ಸರ್ಕಾರ 2025ರ ಗದ್ದರ್ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿದೆ.

ರಶ್ಮಿಕಾ ನಟನೆಯ ದಿ ಗರ್ಲ್ ಫ್ರಂಡ್ಸ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರ ಬಾಕ್ಸ್ ಆಫೀಸಿನಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ.

ರೊಮ್ಯಾಂಟಿಕ್ ಆಧಾರಿತ ಚಿತ್ರ ದಿ ಗರ್ಲ್ ಫ್ರೆಂಡ್ ಅಭಿನಯಕ್ಕೆ ಪತ್ನಿ ರಶ್ಮಿಕಾ ಪ್ರಶಸ್ತಿ ಪಡೆದಿರುವುದಕ್ಕೆ ಪತಿ ವಿಜಯ ದೇವರಕೊಂಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಅವರು ಪ್ರಶಸ್ತಿ ಸಾಧನೆಗಾಗಿ ರಶ್ಮಿಕಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಿಂದೆ ಯಶಸ್ವಿ ತೆಲುಗು ಚಿತ್ರಗಳಾದ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಅಭಿನಯಿಸಿದ್ದಾರೆ. ಈ ಚಿತ್ರಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಚಿತ್ರಗಳ ಯಶಸ್ಸಿಗೆ ಕಾರಣವಾಗಿದೆ.

ವಿಜಯ್ – ಮಂದಣ್ಣ ಜೋಡಿ ಮುಂಬರುವ ಆಕ್ಷನ್ ಡ್ರಾಮಾ ರಣಬಲಿಯಲ್ಲಿ ಒಟ್ಟಿಗೆ ನಟಿಸಲಿದೆ. ರಾಹುಲ್ ಸಂಕ್ರಿತ್ಯನ್ ನಿರ್ದೇಶನದ ಚಿತ್ರದಲ್ಲಿ ವಿಜಯ್ ದೇವರಕೊಂಡ ಸ್ವಾತಂತ್ರ್ಯ ಹೋರಾಟಗಾರರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಜಯಮ್ಮ ಪಾತ್ರದಲ್ಲಿ ನಟಿಸಲಿದ್ದಾರೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!