ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಪ್ರಶಸ್ತಿಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿ ಸಮಾರಂಭವಾದ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಅಕಾಡೆಮಿ ಇತ್ತೀಚೆಗೆ ಹೆಚ್ಚುವರಿ ತಾರೆಯರ ಹೆಸರನ್ನು ಘೋಷಿಸಿದ್ದು, ರಾಬರ್ಟ್ ಡೌನಿ ಜೂನಿಯರ್ ಮತ್ತು ಆನ್ ಹ್ಯಾಥ್ವೇ ಜೊತೆಗೆ ಪ್ರಿಯಾಂಕಾ ಚೋಪ್ರಾ ಅವರ ಹೆಸರೂ ಸೇರಿದೆ.
ಅಕಾಡೆಮಿಯ ಘೋಷಣೆಯನ್ನು ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಈ ಮೊದಲು ಕೂಡ ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಅವರು ಗೋಲ್ಡನ್ ಗ್ಲೋಬ್ ಮತ್ತು ಪ್ರೈಮ್ಟೈಮ್ ಎಮ್ಮಿ ಪ್ರಶಸ್ತಿ ಸಮಾರಂಭಗಳಲ್ಲಿ ಪ್ರಶಸ್ತಿ ಪ್ರದಾನಕಾರರಾಗಿ ಭಾಗವಹಿಸಿದ್ದರು.
ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಲ್ ಅರ್ನೆಟ್, ರಾಬರ್ಟ್ ಡೌನಿ ಜೂನಿಯರ್, ಆನ್ ಹ್ಯಾಥ್ವೇ, ಪಾಲ್ ಮೆಸ್ಕಲ್ ಹಾಗೂ ಗ್ವಿನೆತ್ ಪಾಲ್ಟ್ರೋ ನಿರೂಪಿಸಲಿದ್ದಾರೆ. ಖ್ಯಾತ ನಟ-ನಟಿಯರು ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
—





Be the first to comment