ಭೀಮಾ ತೀರದಲ್ಲಿ

ಮಾ.6ಕ್ಕೆ ಡಿಜಿಟಲ್ ರೂಪದಲ್ಲಿ ಬರಲಿದೆ ‘ಭೀಮಾ ತೀರದಲ್ಲಿ’

14 ವರ್ಷಗಳ ಹಿಂದೆ ವೀರ ಫಿಲಂಸ್ ಮೂಲಕ ಅಣಜಿ ನಾಗರಾಜ್ ಅವರು ನಿರ್ಮಿಸಿದ್ದ, ದುನಿಯಾ ವಿಜಯ್ ಅಭಿನಯದ ಚಿತ್ರ ಭೀಮಾ ತೀರದಲ್ಲಿ ತೆರೆಕಂಡಿತ್ತು.

ಅದೇ ಚಿತ್ರವೀಗ ಡಿಜಿಟಲ್ ರೂಪದಲ್ಲಿ ತೆರೆಯ ಮೇಲೆ ಬರಲಿದೆ. ದರ್ಶನ್, ಸುದೀಪ್‌ರಂಥ ಸ್ಟಾರ್ ಚಿತ್ರಗಳ ನಿರ್ದೇಶಕ ಓಂಪ್ರಕಾಶ್‌ರಾವ್ ಅವರು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು‌. ಚಿತ್ರವನ್ನು ಅಣಜಿ ನಾಗರಾಜ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದರು, ಇದೇ ಮಾರ್ಚ್ 6ರಂದು ರಿಲೀಸಾಗುತ್ತಿರುವ ಈ ಚಿತ್ರದ ಪತ್ರಿಕಾಗೋಷ್ಟಿ ಸೋಮವಾರ ನಡೆಯಿತು. ವೇದಿಕೆಯಲ್ಲಿ ನಿರ್ಮಾಪಕ ನಿರ್ದೇಶಕರಿಬ್ಬರೂ ಹಾಜರಿದ್ದು ಮಾಹಿತಿ ಹಂಚಿಕೊಂಡರು,

ಮೊದಲಿಗೆ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್‌ರಾವ್, ಅಣಜಿ ನಾಗರಾಜ್ ಅವರ ಜತೆ ತುಂಬಾ ಸಿನಿಮಾ ಮಾಡಿದ್ದೇನೆ, ಅದರಲ್ಲಿ ಭೀಮಾ ತೀರದಲ್ಲಿ ಆಗ ತುಂಬಾ ಸದ್ದು ಮಾಡಿ ಯಶಸ್ವೀ ಪ್ರದರ್ಶನ ಕಂಡಿತ್ತು, ಆ ಚಿತ್ರದ ಹಿಂದಿರುವ ಕಥೆಗಳು ತುಂಬಾ ಇವೆ, ನಡೆಯಲು ಸಾಧ್ಯವಾಗದ ನಟ ಲೋಕನಾಥ್ ಅವರು ಆಗ ಅಟ್ಟವನ್ನೂ ಸಹ ಹತ್ತಿ ಅಭಿನಯಿಸಿದ್ದರು, ಸಿನಿಮಾಗೆ ನಿರ್ಮಾಪಕ ನಾಗರಾಜ್ ತುಂಬಾ ಕಷ್ಟಪಟ್ಟಿದ್ದರು, ನಂತರ ಚಿತ್ರ ಯಶಸ್ವಿಯೂ ಆಗಿತ್ತು, ಇದೀಗ ನೆಗೆಟಿವ್‌ನಲ್ಲಿದ್ದ ಚಿತ್ರವನ್ನು ಸ್ವಲ್ಪ ಟ್ರಿಮ್ ಮಾಡಿ ಡಿಜಿಟಲ್ ರೂಪಕ್ಕೆ ತಂದು ರಿಲೀಸ್ ಮಾಡುತ್ತಿದ್ದಾರೆ. ಕನ್ನಡ ಅಲ್ಲದೆ ತೆಲುಗು, ತಮಿಳು ಸೇರಿ ಬೇರೆ ಭಾಷೆಗಳಿಗೂ ಡಬ್ ಮಾಡಿಸಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ, ನಾನೇ ಯೂಟ್ಯೂಬ್‌ನಲ್ಲಿ ಐದಾರು ಸಲ ಈ ಚಿತ್ರವನ್ನು ನೋಡಿದ್ದೇನೆ. ಆಗ ಡೈಲಾಗ್, ಮೇಕಿಂಗ್‌ನಲ್ಲಿ ತುಂಬಾ ಕೆಲಸ ಮಾಡಿದ್ದೆವು ಎಂದರು.

ನಂತರ ನಿರ್ಮಾಪಕ ಅಣಜಿ ನಾಗರಾಜ್ ಮಾತನಾಡಿ ಮಾರ್ಚ್ 6ಕ್ಕೆ ಭೀಮಾ ತೀರದಲ್ಲಿ ರಿಲೀಸ್‌ಆಗುತ್ತಿದೆ, ನಾನು ತುಂಬಾ ಇಷ್ಟಪಟ್ಟು ಮಾಡಿದ ಚಿತ್ರವಿದು, ಈಗ ಎಡಿಟ್ ಮಾಡಿ ಹೊಸ ರೂಪದಲ್ಲಿ ರಿಲೀಸ್ ಮಾಡುತ್ತಿದ್ದೇವೆ, ದಿಜಿಟಲ್‌ಗೂ ರೀಲ್‌ಗೂ ತುಂಬಾ ವ್ಯತ್ಯಾಸವಿದೆ. ರೀಲ್ ಕ್ವಾಲಿಟಿ ಡಿಜಿಟಲ್‌ನಲ್ಲಿ ಮಾಡಲು ಸಾಧ್ಯವಿಲ್ಲ, ನೆಗೆಟಿವ್‌ನಲ್ಲಿ ನಮ್ಮ ಚಿತ್ರವೇ ಕೊನೆಯದಾಗಿತ್ತು, 14 ವರ್ಷಗಳಾದರೂ ನೋಡುವಾಗ ಈಗಷ್ಟೇ ಮಾಡಿದ ಚಿತ್ರ ಅನಿಸುತ್ತದೆ, ಆಗ ಐದಾರು ಕೋಟಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು, ಈಗದು 50-60 ಕೋಟಿ ಬಜೆಟ್‌ನ ಸಿನಿಮಾ ಅನಿಸುತ್ತದೆ, ನನ್ನ ಸ್ನೇಹಿತ ವೆಂಕಟೇಶ್ ಜತೆ ಇತರರು ಸೇರಿ ಭೀಮಾ ತೀರದಲ್ಲಿ ತೆಲುಗಿನ ಕಡಪ ಚಿತ್ರವನ್ನು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ, ಈವಾರ ಕನ್ನಡ ಮತ್ತು ತೆಲುಗಿನಲ್ಲಿ, 2 ವಾರ ಬಿಟ್ಟು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ, ನಾಯಕ ವಿಜಯ್ ಅವರು ಯಾವಾಗ ಕರೆದ್ರೂ ಬರ‍್ತೀನಿ ಅಂದಿದ್ರು, ನಾನು ಅರ್ಜಂಟಾಗಿ ಪ್ರೆಸ್‌ಮೀಟ್ ಇಟ್ಕೊಂಡಿದ್ದರಿಂದ ಬರಲಾಗಿಲ್ಲ, ರಿಲೀಸ್ ಟೈಮಲ್ಲಿ ನಮ್ಮ ಜತೆಗಿರ‍್ತಾರೆ ಎಂದು ಹೇಳಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!