‘ಏನೇ ಆಗಲಿ, ಎಷ್ಟೇ ವಿರೋಧ ಎದುರಾಗಲಿ ನಾವು ಎದರಿಸೋಣ. ಒಂದು ವೇಳೆ ಇಡೀ ಜಗತ್ತು ನಿನ್ನ ವಿರುದ್ಧ ನಿಂತರೆ, ನಾನೆಂದಿಗೂ ನಿನ್ನನ್ನು ಬಿಟ್ಟುಕೊಡುವುದಿಲ್ಲ’ ಎಂದ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಭಾರೀ ವೈರಲ್ ಆಗಿದೆ.
ತ್ರಿಷಾ ಅವರು ವ್ಯಕ್ತಪಡಿಸಿರುವ ಹೃದಯಸ್ಪರ್ಶಿ ಸಾಲುಗಳ ಭಾವನೆಗಳನ್ನು ಅಭಿಮಾನಿಗಳು ವಿಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಕೆಲವರು ಇದನ್ನು ಅವರ ವೈಯಕ್ತಿಕ ಬದುಕಿನ ವಿಚಾರಗಳೊಂದಿಗೆ ಹೋಲಿಸುತ್ತಿದ್ದಾರೆ.
ಅಭಿಮಾನಿಗಳು ತ್ರಿಷಾ ಅವರ ಪೋಸ್ಟ್ಗೆ ಸಾವಿರಾರು ಕಾಮೆಂಟ್ಗಳು ಹಾಗೂ ಲೈಕ್ಗಳನ್ನು ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #Trisha ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
ತ್ರಿಷಾ ಅವರು ವಿಜಯ್ ಅವರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆಂದು ಪೋಸ್ಟ್ ನ್ನು ವೈರಲ್ ಮಾಡಲಾಗುತ್ತಿದೆ. ಆದರೆ ಈ ಪೋಸ್ಟ್ಅಸಲಿಯೋ? ನಕಲಿಯೋ? ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ಬಗ್ಗೆ ತ್ರಿಷಾ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇದೀಗ ಕಳೆದ ವರ್ಷ ಮಾರ್ಚ್ 29 ರಂದು ತ್ರಿಷಾ ಪ್ರೀತಿಯ ಬಗ್ಗೆ ಮಾಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಕೂಡ ವೈರಲ್ ಆಗಿದೆ. ಆ ಪೋಸ್ಟ್ನಲ್ಲಿ ‘ ಪ್ರೀತಿ ಯಾವಾಗಲೂ ಗೆಲ್ಲುತ್ತದೆ’ ಎಂದು ತ್ರಿಷಾ ಉಲ್ಲೇಖಿಸಿದ್ದರು. ವಧುವಿನ ಅಲಂಕಾರದಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿ “ಅಲೈಪಾಯುಡೆ” ಚಿತ್ರದ “ಸೀಕ್ರೆಟ್ ಫ್ರೆಂಡ್” ಹಾಡನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಿದ್ದರು.
ಪೋಸ್ಟ್ ನೋಡಿದ ನೆಟ್ಟಿಗರು ‘ ಓಹ್ಆ ! ಸೀಕ್ರೆಟ್ ಫ್ರೆಂಡ್ ಯಾರೆಂದು ನನಗೆ ಈಗ ಅರ್ಥವಾಯಿತು’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
—-





Be the first to comment