‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾನಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಮಾರ್ಚ್ 2ರಂದು ರಿಲೀಸ್ ಆಗಲಿದೆ. ‘ತಬಾಹಿ’ ಎಂಬ ಈ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಹಾಡು ಸಖತ್ ಹಾಟ್ ಮತ್ತು ರೊಮ್ಯಾಂಟಿಕ್ ಆಗಿರಲಿದೆ ಎಂಬುದನ್ನು ಪೋಸ್ಟರ್ನಲ್ಲಿ ಸೂಚಿಸಲಾಗಿದೆ.
ಹಾಡಿನ ಪೋಸ್ಟರ್ನಲ್ಲಿ ಯಶ್ ಅವರು ಕಿಯಾರಾ ಅಡ್ವಾಣಿ ಅವರನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಇದೆ. ಈ ಪೋಸ್ಟರ್ನಲ್ಲಿ ಕಿಯಾರಾ ಮುಖ ಕಾಣಿಸಿಲ್ಲ. ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ‘ತಬಾಹಿ’ ಹಾಡಿನ ಪೋಸ್ಟರ್ ನೋಡುತ್ತಿದ್ದಂತೆ ಯಶ್ ಅಭಿಮಾನಿಗಳ ಕೌತುಕ ಹೆಚ್ಚಾಗಿದೆ. ಸಾವಿರಾರು ಕಮೆಂಟ್ಗಳ ಮೂಲಕ ತಮ್ಮ ಎಗ್ಸೈಟ್ಮೆಂಟ್ ತೋರಿಸಿದ್ದಾರೆ.ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿರ್ಶಾ ಅವರು ಸಂಗೀತ ನೀಡಿದ್ದಾರೆ.
ಜೀ ಮ್ಯೂಸಿಕ್’ ಮೂಲಕ ‘ಟಾಕ್ಸಿಕ್’ ಸಿನಿಮಾದ ಎಲ್ಲ ಭಾಷೆಯ ಹಾಡುಗಳು ರಿಲೀಸ್ ಆಗಲಿವೆ. ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ ಬಸ್ರೂರು ಅವರು ಒಂದು ಹಾಡಿಗೆ ಸಂಗೀತ ನೀಡುವುದರ ಜೊತೆಗೆ ಹಿನ್ನೆಲೆ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಒಟ್ಟು 5 ಮಂದಿ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ.
‘ಟಾಕ್ಸಿಕ್’ ಮಾರ್ಚ್ 19ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡಿದೆ.
—-





Be the first to comment