ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಆರತಕ್ಷತೆ ಮುಗಿದ ಕೂಡಲೇ ಖಾಸಗಿ ದ್ವೀಪವಾದ ಕ್ಯಾಲಿವಿನಿ ದ್ವೀಪಕ್ಕೆ ಹನಿಮೂನ್ಗೆ ಹೊರಡಲಿದ್ದಾರೆ.
80 ಎಕರೆ ವಿಶಾಲವಾದ ದ್ವೀಪ ಇದಾಗಿದೆ. ಐಶಾರಾಮಿ ರೆಸಾರ್ಟ್ ಹೊಂದಿರುವ ಈ ದ್ವೀಪ ಅತ್ಯಂತ ದುಬಾರಿ ದ್ವೀಪವೂ ಹೌದು. ವಿಜಯ್ ಮತ್ತು ರಶ್ಮಿಕಾ ಅವರು ಕ್ಯಾಲಿವಿನಿ ದ್ವೀಪ ಅಲ್ಲದೆ ಇನ್ನೂ ಕೆಲವು ದೇಶಗಳ ಪ್ರವಾಸ ಮಾಡಲಿದ್ದಾರೆ.
ರಶ್ಮಿಕಾ ಮೆಚ್ಚಿನ ತಾಣವಾದ ಜಪಾನ್ ಮತ್ತು ವಿಜಯ್ ದೇವರಕೊಂಡ ಮೆಚ್ಚಿನ ತಾಣವಾದ ಇಟಲಿಗೆ ಹನಿಮೂನ್ಗೆ ತೆರಳಲಿದ್ದಾರೆ. ಜಪಾನ್ ರಶ್ಮಿಕಾ ಮೆಚ್ಚಿನ ಪ್ರವಾಸಿ ತಾಣ ಆಗಿದ್ದು, ಈ ಹಿಂದೆ ಅವರು ಜಪಾನಿಗೆ ಹೋದಾಗ ಈ ಬಗ್ಗೆ ಮಾತನಾಡಿದ್ದರು. ವಿಜಯ್ ದೇವರಕೊಂಡಗೆ ಇಟಲಿ ಇಷ್ಟ ಎನ್ನಲಾಗುತ್ತಿದೆ.
ಇಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹ ಉದಯಪುರದಲ್ಲಿ ನಡೆಯುತ್ತಿದೆ. ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಆರತಕ್ಷತೆಗೆ ಟಾಲಿವುಡ್, ಸ್ಯಾಂಡಲ್ವುಡ್ ಮತ್ತು ಬಾಲಿವುಡ್ನ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಭಾಗಿ ಆಗಲಿದ್ದಾರೆ. ಆರತಕ್ಷತೆ ಮುಗಿದ ಎರಡೇ ದಿನಕ್ಕೆ ಈ ಜೋಡಿ ಹನಿಮೂನ್ಗೆ ಹೊರಡಲಿದೆ.
—-





Be the first to comment