ಕಮಲ್ ಸಿನಿಮಾಕ್ಕೆ ರಜನಿಕಾಂತ್ ಸಂಭಾವನೆ ಎಷ್ಟು?

ಸೂಪರ್ ಸ್ಟಾರ್ ರಜನೀಕಾಂತ್, ಗೆಳೆಯ ಕಮಲ್ ಹಾಸನ್ ಸಿನಿಮಾಕ್ಕೆ  225 ಕೋಟಿ ರೂಪಾಯಿ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ರಜನೀಕಾಂತ್   ಗೆಳೆಯನಿಗೆ ಯಾವುದೇ ರಿಯಾಯಿತಿ ನೀಡದೆ ಭಾರಿ ದೊಡ್ಡ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಬ್ಬ ನಟನಿಗೆ ನೀಡುತ್ತಿರುವ ಅತ್ಯಂತ ಗರಿಷ್ಠ ಸಂಭಾವನೆಗಳಲ್ಲಿ ಒಂದಾಗಲಿದೆ. ರಜನೀಕಾಂತ್ ನಾಯಕನಾಗಿ ನಟಿಸಲಿರುವ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದು,  ತಾವೂ ಪ್ರಮುಖ  ಪಾತ್ರವೊಂದರಲ್ಲಿ ನಟಿಸಲಿದ್ದಾರೆ.

ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆಯಾದರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆಜೈಲರ್’, ‘ಜೈಲರ್ 2’ ನಿರ್ದೇಶಿಸಿರುವ ನೆಲ್ಸನ್ ದಿಲೀಪ್​​ಕುಮಾರ್ ಅವರು ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಸುಮಾರು 35 ವರ್ಷಗಳ ಹಿಂದೆ ‘ಗಿರಫ್ತಾರ್’ ಸಿನಿಮಾದಲ್ಲಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಕೊನೆಯದಾಗಿ ಒಟ್ಟಿಗೆ ನಟಿಸಿದ್ದರು. ಇದೀಗ 35 ವರ್ಷಗಳ ಬಳಿಕ ಇಬ್ಬರೂ ಒಟ್ಟಿಗೆ ನಟಿಸಲಿರುವುದು ಪ್ರೇಕ್ಷಕರಿಗೆ  ಕುತೂಹಲ ಮೂಡಿಸಿದೆ. ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ರಜನೀಕಾಂತ್ ಮತ್ತು ಕಮಲ್ ಹಾಸನ್ ಸಿನಿಮಾಕ್ಕಾಗಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!