ವಿಜಯ್ ನಟನೆಯ ತಮಿಳಿನ ಬಹು ನಿರೀಕ್ಷಿತ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಆಗದೆ OTT ಡೀಲ್ ಅರ್ಧಕ್ಕೆ ಕುಸಿತ ಕಂಡಿದೆ.
Amazon Prime Video ‘ಜನ ನಾಯಗನ್’ ಚಿತ್ರಕ್ಕೆ ಮೊದಲು 120 ಕೋಟಿ ರೂಪಾಯಿ ನೀಡಿ ಹಕ್ಕು ಪಡೆದುಕೊಂಡಿತ್ತು. ಆದರೆ ಸಿನಿಮಾ ಬಿಡುಗಡೆ ವಿಳಂಬದ ಕಾರಣದಿಂದ ಈಗ ಕೇವಲ 60 ಕೋಟಿ ರೂಪಾಯಿ ನೀಡಲು ಮಾತ್ರ ಸಿದ್ಧವಾಗಿದೆ ಎಂಬ ವರದಿ ಹರಿದಾಡುತ್ತಿದೆ.
ಕೋರ್ಟ್ ಹೋರಾಟ ನಡೆಸುತ್ತಿದ್ದ ಚಿತ್ರ ತಂಡ ಇದೀಗ ಕೇಸ್ ಹಿಂಪಡೆದು ಪುನರ್ ವಿಮರ್ಶೆ ಸಂಸ್ಥೆಗೆ ಸಿನಿಮಾ ಸಲ್ಲಿಸಿದೆ. ಎರಡು ವಾರಗಳೊಳಗೆ ಸೆನ್ಸಾರ್ ಪ್ರಮಾಣ ಪತ್ರ ಸಿಗುವ ನಿರೀಕ್ಷೆ ಇದ್ದರೂ ಚಿತ್ರ ಬಿಡುಗಡೆಯ ಗೊಂದಲ ಮುಂದುವರಿದಿದೆ.
ಸೆನ್ಸಾರ್ ಸಿಕ್ಕ ತಕ್ಷಣ ಚಿತ್ರವನ್ನು ತಮಿಳುನಾಡು ಸೇರಿದಂತೆ ಭಾರತಾದ್ಯಂತ ಮತ್ತು ವಿಶ್ವ ಮಟ್ಟದಲ್ಲಿ ಬಿಡುಗಡೆ ಮಾಡಲು ಭಾರೀ ಥಿಯೇಟರ್ ಸೆಟಪ್ ಅಗತ್ಯವಿದೆ. ಮಾರ್ಚ್ 19ರಂದು Toxic ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಒಂದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳನ್ನು ಕಡಿಮೆ ಅವಧಿಯಲ್ಲಿ ಬಿಡುಗಡೆ ಮಾಡುವುದು ಅಸಾಧ್ಯ. ಹೀಗಾಗಿ ‘ಜನ ನಾಯಗನ್’ ಚಿತ್ರ ಬಿಡುಗಡೆ ಮತ್ತಷ್ಟು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.
—-





Be the first to comment