‘ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಟೀಸರ್ ನೋಡಿ ಯಾವುದೇ ತೀರ್ಮಾನಕ್ಕೆ ಬರಬೇಡಿ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹೇಳಿದ್ದಾರೆ.
ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಶನ್, ಟೀಸರ್ನ ಕೆಲವು ದೃಶ್ಯಗಳು ಸಂತ ಮೈಕೆಲ್ ಅವರಿಗೆ ಅಗೌರವ ಸೂಚಿಸುತ್ತದೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದೆ ಎಂದು ದೂರಿದೆ. ಈ ವಿಚಾರವಾಗಿ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.
‘ಟಾಕ್ಸಿಕ್ ಇನ್ನೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣ ಪಡೆದಿಲ್ಲ. ಆದ್ದರಿಂದ ಈ ಹಂತದಲ್ಲಿ ಅಂತಿಮ ತೀರ್ಪು ನೀಡಲು ಆಗುವುದಿಲ್ಲ. ಯಾವುದೇ ಅಶ್ಲೀಲ ಅಥವಾ ಅಗೌರವ ತೋರುವ ದೃಶ್ಯಗಳನ್ನು ನಿರ್ಮಾಪಕರು ನಿರಾಕರಿಸಿದ್ದಾರೆ. ಚಿತ್ರ ಇನ್ನೂ ಸೆನ್ಸಾರ್ಗಾಗಿ ಕಾಯುತ್ತಿರುವ ಕಾರಣ ಯಾವುದೇ ಸಮಸ್ಯೆಗಳನ್ನು ಸೆನ್ಸಾರ್ ಮಂಡಳಿ ಪರಿಹರಿಸುತ್ತದೆ. ಸರಿಪಡಿಸುವ ಕ್ರಮ ಅಗತ್ಯವಿದ್ದರೆ ನಿಯಂತ್ರಣ ಸಂಸ್ಥೆಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ’ ಎಂದು ಜಯಮಾಲಾ ಹೇಳಿದ್ದಾರೆ.
‘ಟಾಕ್ಸಿಕ್ ಟೀಸರ್ ಬಗ್ಗೆ ದೂರುಗಳು ಬಂದಿವೆ. ನಿಖರವಾಗಿ ಏನು ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ. ಸೆನ್ಸಾರ್ ಮಂಡಳಿಯಿಂದ ಪರಿಶೀಲಿಸುವ ಮೊದಲೇ ಚಿತ್ರದ ಬಗ್ಗೆ ಚರ್ಚಿಸುವುದು ಸರಿಯಲ್ಲ. ಟೀಸರ್ ಪ್ರೇಕ್ಷಕರನ್ನು ಥಿಯೇಟರ್ಗಳಿಗೆ ಆಕರ್ಷಿಸುವ ಒಂದು ಬಗೆಯಾಗಿದೆ. ಚಿತ್ರಕ್ಕಾಗಿ ನಿರ್ಮಾಪಕರು ನೂರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ವೀಕ್ಷಕರು ಅಭಿಪ್ರಾಯವನ್ನು ಬೆಳೆಸಿಕೊಳ್ಳುವ ಮೊದಲು ಪೂರ್ಣ ಚಿತ್ರವನ್ನು ನೋಡಬೇಕು’ ಎಂದು ಹೇಳಿದರು.
ಯಶ್ ಮತ್ತು ಗೀತು ಮೋಹನ್ದಾಸ್ ಬರೆದಿರುವ ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಇದ್ದಾರೆ. ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸಿದ ‘ಟಾಕ್ಸಿಕ್’ ಮಾರ್ಚ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
—-





Be the first to comment