ಯಶ್ ಅವರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ, ನೇಪಾಳ, ಜಪಾನ್ ಮತ್ತು ಚೀನಾ ಹೊರತುಪಡಿಸಿ ಪ್ರಮುಖ ಮಾರುಕಟ್ಟೆಗಳಲ್ಲಿ ಅದರ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳಿಗಾಗಿ ಫಾರ್ಸ್ ಫಿಲ್ಮ್‌ನೊಂದಿಗೆ 105 ಕೋಟಿ ರೂಪಾಯಿ ವಿದೇಶಿ ವಿತರಣಾ ಒಪ್ಪಂದವನ್ನು ಮಾಡಿಕೊಂಡಿದೆ.
ಇದು ಭಾರತೀಯ ಚಲನಚಿತ್ರವೊಂದಕ್ಕೆ ದೊರೆತ ಅತಿದೊಡ್ಡ ಬಿಡುಗಡೆ ಪೂರ್ವ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಒಂದಾಗಿದೆ. ಟಾಕ್ಸಿಕ್ ನಿರ್ಮಾಪಕರು ದಿಲ್ ರಾಜು ಅವರ ಪವರ್‌ಹೌಸ್ ಬ್ಯಾನರ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಜೊತೆಗೆ ಫಾರ್ಸ್ ಫಿಲ್ಮ್ ಒಪ್ಪಂದ ಮಾಡಿಕೊಂಡಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಯಶ್ ಅವರ ಕೆಜಿಎಫ್ 2 ಯಶಸ್ಸಿನ ನಂತರ ಹೆಚ್ಚಿನ ನಿರೀಕ್ಷೆಯ ನಡುವೆ ಚಿತ್ರ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್ ‘ ಚಿತ್ರದ ಟೀಸರ್ ನ್ನು ಜನವರಿ 8 ರಂದು ಯಶ್ ಅವರ 40ನೇ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿದೆ.
—-





Be the first to comment