‘ಯಾನ’ ಟ್ರೇಲರ್ ಬಿಡುಗಡೆ ಮಾಡಿದ ರಾಂಕಿಂಗ್ ಸ್ಟಾರ್

ಈ ಬಂಧನ ಚಿತ್ರವನ್ನು ನಿರ್ದೇಶಿಸಿದ್ದ ನಂತರ ವಿಜಯಲಕ್ಷ್ಮೀಸಿಂಗ್ ಅವರು ನಿರ್ದೇಶಿಸಿರುವ ಯಾನ ಚಿತ್ರದ ಟ್ರೇಲರ್ ಮೊನ್ನೆ ಬಿಡುಗಡೆಯಾಗಿದ್ದು ಜುಲೈ 12 ರಂದು ಚಿತ್ರವು ಬೆಳ್ಳಿಪರದೆಗೆ ಬರಲಿದೆ.ಜೈಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್ ಅವರ ಪುತ್ರಿಯರಾದ ವೈನಿಧಿ, ವೈಷ್ಣವಿ, ವೈಭವಿ ನಟಿಸಿರುವ ಈ ಚಿತ್ರದ ಟ್ರೇಲರ್ ಅನ್ನುರಾಂಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು. ಚಿತ್ರದ ನಾಯಕಿಯರು ಮತ್ತು ನಾಯಕರನ್ನು ಪರಿಚಯಿಸುವ ಗೀತೆಯನ್ನು ಮೊನ್ನೆ ಪ್ರದರ್ಶಿಸಲಾಯಿತು.ನಿರ್ಮಾಪಕ ಹರೀಶ್ ಶೆರಿಗಾರ್ ಮಾತನಾಡಿ, ಇದು ನಿರ್ದೇಶಕಿ ವಿಜಯಲಕ್ಷ್ಮೀಸಿಂಗ್‍ರ ನಾಲ್ಕು ವರ್ಷಗಳ ಕನಸಿನ ಕೂಸು. ಈ ಚಿತ್ರದ ಷೂಟಿಂಗ್ ಗೆಂದೇ ಎರಡು ವರ್ಷಗಳು ತೆಗೆದುಕೊಂಡಿದ್ದರೂ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದ್ದರೂ ವಿಜಯಲಕ್ಷ್ಮೀಸಿಂಗ್‍ರ ಹೃದಯಬಡಿತ ಹೆಚ್ಚಾಗಿದೆ.

ಚಿತ್ರೋದ್ಯಮದ ಪ್ರಮುಖ ಕುಟುಂಬದ ಮೂರನೇ ತಲೆಮಾರಿನ ಮೂವರು ಹೆಣ್ಣುಮಕ್ಕಳು ಒಟ್ಟಾಗಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ ಎಂದು ಹೇಳಿದರು. ರಾಂಕಿಂಗ್ ಸ್ಟಾರ್ ಮಾತನಾಡಿ, ಕನ್ನಡ ಚಿತ್ರರಂಗವೆಂಬುದು ಒಂದು ದೊಡ್ಡ ಆಲದ ಮರವಿದ್ದ ಹಾಗೆ. ಇದರಡಿ ಎಷ್ಟೋ ಮಂದಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.ಅದೇ ರೀತಿ ವಿಜಯಲಕ್ಷ್ಮೀಸಿಂಗ್‍ರ ಕುಟುಂಬದವರೂ ಕೂಡ ಎಷ್ಟೋ ಜನರಿಗೆ ದಾರಿ ದೀಪವಾಗಿದ್ದಾರೆ. ವಿಜಯಲಕ್ಷ್ಮೀ ಅವರ ಸೋದರ ರಾಜೇಂದ್ರಸಿಂಗ್ ಬಾಬು ಅವರು ಉತ್ತಮ ನಿರ್ದೇಶಕರು, ಅವರ ನಿರ್ದೇಶನದಡಿ ಅನೇಕ ಮಹೋನ್ನತ ಚಿತ್ರಗಳು ಬಂದಿವೆ. ವಿಜಯಲಕ್ಷ್ಮೀಸಿಂಗ್ ಅವರು ಕೂಡ ಪ್ರಬುದ್ಧ ನಿರ್ದೇಶಕರಿ.ಅವರಿಂದ ನಮ್ಮಂತಹ ಕಲಾವಿದರು ಸಾಕಷ್ಟು ವಿಷಯಗಳನ್ನು ಕಲಿಯಬಹುದು. ನಮ್ಮ ಕೆಜಿಎಪ್ ಚಿತ್ರದ ಆಡಿಯೋಕ್ಕೆ ಉತ್ತಮ ರೇಟ್ ಕೊಟ್ಟು ಖರೀದಿಸಿದ ಲಹರಿ ವೇಲು ಅವರು ಧನ್ಯವಾದಗಳನ್ನು ಸಲ್ಲಿಸಿದರು.

ನಟ ಜೈಜಗದೀಶ್ ಮಾತನಾಡಿ, ಇತ್ತೀಚೆಗೆ ನಗರದ ಸಂಸ್ಕøತಿಯಲ್ಲಿ ಯುವ ಜನರು ಮೊಬೈಲ್, ಪೇಸ್‍ಬುಕ್, ಲ್ಯಾಪ್‍ಟಾಪ್ , ವಾಟ್ಸಪ್‍ಗಳ ಹಿಂದೆ ಬಿದ್ದಿದ್ದು ಅದರಿಂದಾಗುವ ಉಪಯೋಗ ಹಾಗೂ ದುರುಪಯೋಗದ ಬಗ್ಗೆ ಹಾಗೂ ಇಂತಹ ದುಶ್ಚಟಗಳಿಂದಾಗಿ ಏನೇನು ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ನಿರ್ದೇಶಕಿ ವಿಜಯಲಕ್ಷ್ಮೀ ಹೇಳಲು ಹೊರಟಿದ್ದಾರೆ ಎಂದು ಏಹಳಿದರು.

ಮಾರ್ಚ್ 22 ಚಿತ್ರಕ್ಕೆ ಬಂಡವಾಳ ಹೂಡಿದ್ದ ಹರೀಶ್ ಶೇರಿಗಾರ್, ಅವರ ಪತ್ನಿ ಶರ್ಮಿಳಾ ಶೇರಿಗಾರ್ ಯಾನಕ್ಕೆ ಬಂಡವಾಳ ಹೂಡಿದ್ದು, ವಿಜಯಲಕ್ಷ್ಮೀ ಸಿಂಗ್ ಅವರೇ ಕಥೆಯನ್ನು ರಚಿಸಿದ್ದು, ಚಿತ್ರಕಥೆ ರಚಿಸುವಲ್ಲಿ ವಿಜಯಲಕ್ಷ್ಮೀಸಿಂಗ್‍ಗೆ ಸುಹಾಸ್ ಗಂಗಾಧರ್ ನೆರವಾಗಿದ್ದಾರೆ. ಸುನಿ ಹಾಗೂ ಅಭಿಷೇಕ್ ಸಂಭಾಷಣೆ ರಚಿಸಿದ್ದಾರೆ. ತಾರಾಬಳಗದಲ್ಲಿ ವೈಭವಿ, ವೈನಿದಿ, ವೈಸಿರಿ, ಚಕ್ರವರ್ತಿ, ಸುಮುಖ, ಅಭಿಷೇಕ್, ಅನಂತನಾಗ್, ಸುಹಾಸಿನಿ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಮುಂತಾದವರಿದ್ದಾರೆ. ಈ ಚಿತ್ರದ ಆರು ಹಾಡುಗಳಿಗೆ ಸಂಗೀತ ಸಂಯೋಜನೆಯನ್ನು ಜೋಶ್ವಾ ಶ್ರೀಧರ್ ಅವರು ಮಾಡಿದ್ದಾರೆ. ಚಿತ್ರದ ಛಾಯಗ್ರಹಣವನ್ನು ಕರಂ ಚಾವ್ಲಾ ಮಾಡಿದ್ದಾರೆ.

ತಮ್ಮ ಮಕ್ಕಳನ್ನು ಚಿತ್ರರಂಗದಲ್ಲಿ ಬೆಳಗಿಸಬೇಕೆಂಬ ಆಸೆಯಿಂದ ಯಾನದ ಹಿಂದೆ ಹೊರಟಿರುವ ವಿಜಯಲಕ್ಷ್ಮೀಸಿಂಗ್ ಅವರ ಕನಸು ನನಸಾಗುವ ಮೂಲಕ ವೈಭವಿ, ವೈಷ್ಣವಿ, ವೈನಿದಿ ದೊಡ್ಡ ಮಟ್ಟದ ನಾಯಕಿಯರಾಗಿ ಬೆಳೆಯಲಿ ಎಂಬುದೇ ಸಿನಿಸುದ್ದಿಯ ಆಶಯ.

This Article Has 1 Comment
  1. Pingback: binance cc

Leave a Reply

Your email address will not be published. Required fields are marked *

Translate »
error: Content is protected !!