ಚಿತ್ರ: ಜೆಸಿ
ನಿರ್ದೇಶನ: ಚೇತನ್ ಜಯರಾಮ್
ನಿರ್ಮಾಣ: ಡಾಲಿ ಪಿಚ್ಚರ್ಸ್
ತಾರಾ ಬಳಗ: ಸೂರ್ಯ ಪ್ರಖ್ಯಾತ್, ಭಾವನಾ, ರಂಗಾಯಣ ರಘು, ಸ್ವಾತಿ, ಥ್ರಿಲ್ಲರ್ ಮಂಜು, ಇತರರು
ರೇಟಿಂಗ್: 3.5/5
ಕಾಲೇಜಿನಲ್ಲಿ ತನ್ನ ಪಾಡಿಗೆ ತಾನು ಓದಿಕೊಂಡು ಇರುವ ವಿದ್ಯಾರ್ಥಿಯೊಬ್ಬನ ಜೀವನದಲ್ಲಿ ಅನಿರೀಕ್ಷಿತವಾಗಿ ಅಂಡರ್ ವರ್ಲ್ಡ್ ನ ಸೋಂಕು ತಗಳಿದಾಗ ಏನಾಗುತ್ತದೆ ಎನ್ನುವುದನ್ನು ಹೇಳುವ ಚಿತ್ರ ಈ ವಾರ ಬಿಡುಗಡೆ ಆಗಿರುವ ಜೆಸಿ.
ಮಧುಸೂಧನ ಕಾಲೇಜಿನಲ್ಲಿ ಓದುವಾಗ ಮೇಘನಾ ಮೇಲೆ ಪ್ರೀತಿ ಅರಳುತ್ತದೆ. ಆ ಹುಡುಗಿಗೆ ಯಾರೋ ಕಿರುಕುಳ ನೀಡಿದಾಗ ಅವನು ಡಾನ್ ನ್ನು ಮುಗಿಸಿ ಬಿಡುತ್ತಾನೆ. ಅಲ್ಲಿಂದ ಅವನ ಬದುಕಿನ ದಿಕ್ಕು ಬದಲಾಗುತ್ತದೆ. ಅಪ್ಪ ಅಮ್ಮನ ಜೊತೆಗಿನ ಸಂಬಂಧ, ಹುಡುಗಿಯ ಪ್ರೀತಿ, ಇವೆಲ್ಲವೂ ಮುಂದೆ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.
ಮಧುಸೂದನ ಪಾತ್ರದಲ್ಲಿ ಸೂರ್ಯ ಪ್ರಖ್ಯಾತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೇಘನಾ ಪಾತ್ರದಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾಣಿಸುವ ಅಪ್ಪ – ಮಗನ ಸನ್ನಿವೇಶಗಳಲ್ಲಿ ಅಪ್ಪನ ಪಾತ್ರದಲ್ಲಿ ರಂಗಾಯಣ ರಘು ಮನಮುಟ್ಟುವಂತೆ ನಟಿಸಿದ್ದಾರೆ. ಹಿರಿಯ ಕಲಾವಿದರಾದ ಥ್ರಿಲ್ಲರ್ ಮಂಜು, ಸ್ವಾತಿ, ಹಂಸ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ಚೇತನ್ ರಾಮ್ ಸಿನಿಮಾದ ಮೂಲಕ ಜೈಲಿನ ಕಥೆಯನ್ನು ಹೇಳಿದ್ದಾರೆ. ಮಾಸ್ತಿ ಅವರ ಸಂಭಾಷಣೆ ಪಕ್ಕ ರಾ ಆಗಿದೆ.
ರೌಡಿಸಂ, ಆಕ್ಷನ್ ಕಥೆಗಳನ್ನು ಇಷ್ಟ ಪಡುವವರಿಗೆ ಈ ಚಿತ್ರ ಓಕೆ ಅನಿಸಬಹುದು.





Be the first to comment