ಫೆಬ್ರವರಿ 30

ಫೆಬ್ರವರಿ 30 ಸಿನಿಮಾದ ಟ್ರೇಲರ್ ರಿಲೀಸ್

ಬಿಗ್ ಬಾಸ್ ಖ್ಯಾತಿಯ ಅಭಿಷೇಕ್ ಶ್ರೀಕಾಂತ್ ನಟನೆಯ ಫೆಬ್ರವರಿ 30 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ ಫೆಬ್ರವರಿ 30. ಮೈಸೂರು ಮೂಲದ ಪ್ರಶಾಂತ್ ಎಂ.ಎಲ್.ಅವರ ನಿರ್ದೇಶನದ ಈ ಚಿತ್ರಕ್ಕೆ ಶಂಕರ ಮೂವೀಸ್ ಇಂಟರ್ ನ್ಯಾಷನಲ್ ಮೂಲಕ ಜೋಸೆಫ್ ಬೇಬಿ ಅವರು ಬಂಡವಾಳ ಹೂಡಿದ್ದಾರೆ. ಅಭಿಷೇಕ್, ಸಾಹಿತ್ಯಶೆಟ್ಟಿ, ಅಕ್ಷಯ್, ಮನೋಜ್, ಶಿವಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಿ.ಎಂ. ಉನ್ನಿಕೃಷ್ಣನ್ ಅವರ ಛಾಯಾಗ್ರಹಣ, ಲಿಜಿನ್ ಪಂಬೋ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ನಿರ್ದೇಶಕ ಎಂ.ಎಲ್.ಪ್ರಶಾಂತ್ ಅವರು ಮಾತನ್ನಾಡುತ್ತಾ, ಐಟಿ ಎಂಪ್ಲಾಯ್. ಸಣ್ಣ ಪುಟ್ಟ ಶಾರ್ಟ್ ಮೂವಿ ಮಾಡ್ತಾ ಇದ್ದೆ. ಈ ಸಿನಿಮಾವನ್ನ ಚಿಕ್ಕದಾಗಿ ಮಾಡೋಣಾ ಅಂತಾನೇ ಅಂದುಕೊಂಡಿದ್ದು. ಆದ್ರೆ ಬರೀತಾ ಬರೀತಾ ಸಿನಿಮಾ ಚೆನ್ನಾಗಿ ಬಂದಿದೆ. ನಿರ್ಮಾಪಕರಿಗೆ ಕಥೆ ಇಷ್ಟವಾಗಿ ಸಿನಿಮಾ ಮಾಡೋಣಾ ಅಂದ್ರು. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಫೆಬ್ರವರಿ 30 ಅಂದ್ರೆ ಅನ್ ಎಕ್ಸ್ಪೆಕ್ಟೆಡ್ ಡೇಟ್. ಸಿನಿಮಾ ಚೆನ್ನಾಗಿ ಬಂದಿದೆ. ತೆರೆಮೇಲೆ ನೋಡಿದ್ರೆ ಖಂಡಿತ ಇಷ್ಟವಾಗುತ್ತೆ ಎಂದಿದ್ದಾರೆ.

ಫೆಬ್ರವರಿ 30

ನಟ ಅಭಿಷೇಕ್ ಶ್ರೀಕಾಂತ್ ಮಾತನ್ನಾಡಿ, ಫೆಬ್ರವರಿ 30 ಬಗ್ಗೆ ಹೇಳ್ಬೇಕು ಅಂದ್ರೆ ನನ್ನ ಫಸ್ಟ್ ಹಾರಾರ್ ಸಿನಿಮಾ. ಇಲ್ಲಿವರೆಗೂ ಮಾಡಿರಲಿಲ್ಲ. ಪ್ರಶಾಂತ್ ಸರ್ ಕಥೆ ಹೇಳಿದಾಗ ಯೂನಿಕ್ ಅನ್ನಿಸ್ತು. ಆಡಿಷನ್ ನಡೆಸುವಾಗ ಪ್ರಶಾಂತ್ ಸರ್ ಗೂ ಗೊಂದಲವಿತ್ತು. ಆದ್ರೆ ನನಗೆ ಈ ಅವಕಾಶ ಬಂತು. ಜೋಸೆಫ್ ಬೇರೆ ರಾಜ್ಯದಿಂದ ಬಂದು ನಮ್ಮನ್ನ ನಂಬಿ ಇನ್ವೆಸ್ಟ್ ಮಾಡಿದ್ದಕ್ಕೆ ಥ್ಯಾಂಕ್ಯೂ. ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದೀನಿ ಎಂದಿದ್ದಾರೆ.

ಚೇತನ್ ಮಾತನ್ನಾಡುತ್ತಾ, ಫೆಬ್ರವರಿ 30.. ಎಲ್ಲರಿಗೂ ಗೊತ್ತು ಫೆಬ್ರವರಿಯಲ್ಲಿ ಬರೋದೆ 28 ದಿನ. ಆದ್ರೆ ಈ ಸಿನಿಮಾಗೆ ಫೆಬ್ರವರಿ 30 ಅಂತಾನೇ ಯಾಕಿಟ್ವಿ ಅಂದ್ರೆ ಅದಕ್ಕೊಂದು ಒಳ್ಳೆ ಕಾರಣವೂ ಇದೆ. ನಿರ್ದೇಶಕರು ಬಂದು ನಮ್ಮ ಬಳಿ ಒಂದಷ್ಟು ಮಾಹಿತಿಯನ್ನ ಹಂಚಿಕೊಂಡ್ರು. ಅದಾದ ನಂತರದಲ್ಲಿ ಸಿನಿಮಾ ಮಾಡಬೇಕು ಅನ್ನಿಸ್ತು. ಒಬ್ಬ ತಮಿಳುನಾಡು ವ್ಯಕ್ತಿ ನಮ್ಮ ಕನ್ನಡ ಸಿನಿಮಾ ಮಾಡ್ತಾ ಇದ್ದಾರೆ ಅನ್ನೋದು ಹೆಮ್ಮೆಯ ವಿಚಾರ ಅಂತ ತಮ್ಮ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!