ಚಂದ್ರಚೂಡ್ ವಿರುದ್ಧ ನಿರ್ಮಾಪಕರ ಸಂಘ ಪೊಲೀಸ್ ದೂರು

ಚಲನಚಿತ್ರ ನಟ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ  ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.

ಚಂದ್ರಚೂಡ್ ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ನ ‘ಜನ ನಾಯಗನ್’ ಸಿನಿಮಾ ವಿಷಯವಾಗಿ ಹೇಳಿರುವ ಕೆಲವು ಹೇಳಿಕೆಗಳು ಅವಹೇಳನಕಾರಿ ಹಾಗೂ ಅಶ್ಲೀಲವಾಗಿವೆ ಎಂದು ಆರೋಪಿಸಲಾಗಿದೆ.

ಚಂದ್ರಚೂಡ್ ಅವರು  “ಕೆಲವು ನಿರ್ಮಾಪಕರು ಹೀರೋಗಳ ವಿಚಾರ ಬಂದರೆ ಅವರ ಮನೆಗೆ ಕಾಂಡೋಮ್ ತರಿಕೊಳ್ಳುತ್ತಾರೆ. ಆದರೆ ತಂತ್ರಜ್ಞರು, ಲೈಟ್ ಬಾಯ್ಸ್, ಪ್ರೊಕ್ಷಡನ್ ಹುಡುಗರು, ರೈಟರ್ ವಿಚಾರ ಬಂದರೆ ಸರಿಯಾಗಿ ಹಣ ಕೊಡಲ್ಲ” ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. ಈ ಹೇಳಿಕೆ  ನಿರ್ಮಾಪಕರ ಗೌರವಕ್ಕೆ ಹಾನಿ ಉಂಟುಮಾಡುತ್ತದೆ ಎಂದು ಸಂಘ  ದೂರು ಸಲ್ಲಿಸಿದೆ.

ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಮಾನಹಾನಿ, ಉದ್ದೇಶಪೂರ್ವಕ ಅವಮಾನ, ಐಟಿ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ಮಾಪಕರ ಸಂಘ ದೂರು ಸಲ್ಲಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!