ಚಿತ್ರ: ಸೀಟ್ ಎಡ್ಜ್
ನಿರ್ದೇಶನ: ಚೇತನ್ ಶೆಟ್ಟಿ
ನಿರ್ಮಾಣ: ಗಿರಿಧರ್ ಟಿ ವಸಂತಪುರ
ತಾರಾ ಬಳಗ: ಸಿದ್ದು ಮೂಲಿಮನಿ, ರವೀಕ್ಷಾ ಶೆಟ್ಟಿ, ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ, ಇತರರು
ರೇಟಿಂಗ್: 3.5
ಘೋಸ್ಟ್ ಹಂಟಿಂಗ್ ಮಾಡುವ ವ್ಲಾಗರ್ ಒಬ್ಬನ ಬದುಕಿನಲ್ಲಿ ನಡೆಯುವ ಕಥೆಯನ್ನು ಒಳಗೊಂಡ ಚಿತ್ರ ಈ ವಾರ ಬಿಡುಗಡೆ ಆಗಿರುವ ‘ಸೀಟ್ ಎಡ್ಜ್ ‘.
ಐಟಿ ಕೆಲಸ ಮಾಡುವ ಯುವಕ ಸಿದ್ದು ಅದನ್ನು ಬಿಟ್ಟು ವ್ಲಾಗರ್ ಆಗಿ ಘೋಸ್ಟ್ ಹಂಟಿಂಗ್ ಮಾಡಲು ಮುಂದಾಗುತ್ತಾನೆ. ಅವನು ಘೋಸ್ಟ್ ಟೌನ್ ಎನ್ನುವ ಜಾಗಕ್ಕೆ ಹೋಗಿ ಒಂದು ರಾತ್ರಿ ಆ ಭೂತ ಬಂಗಲೆಯಲ್ಲಿ ಕಳೆದು ಅಲ್ಲಿನ ವಿಚಿತ್ರ ಸನ್ನಿವೇಶಗಳನ್ನು ವಿಡಿಯೋ ಮಾಡಲು ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ಅವನಿಗೆ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ? ಅದನ್ನು ಅವನು ಹೇಗೆ ಮೆಟ್ಟಿ ನಿಲ್ಲುತ್ತಾನೆ ಎನ್ನುವುದನ್ನು ತಿಳಿಯಲು ಚಿತ್ರವನ್ನು ವೀಕ್ಷಿಸಬೇಕಿದೆ.
ಘೋಸ್ಟ್ ಹಂಟರ್ ಪಾತ್ರದಲ್ಲಿ ಸಿದ್ದು ಮೂಲಿಮನಿ ಕಾಣಿಸಿಕೊಂಡಿದ್ದಾರೆ. ಇವರ ಪ್ರೇಯಸಿಯಾಗಿ ರವೀಕ್ಷಾ ಶೆಟ್ಟಿ ತೆರೆಯ ಮೇಲೆ ನಟಿಸಿದ್ದಾರೆ.
ಘೋಸ್ಟ್ ಹಂಟಿಂಗ್ ವ್ಲಾಗರ್ ಆಗಿ ಸಿದ್ದು ಮೂಲಿಮನಿ ಇಷ್ಟವಾಗುತ್ತಾರೆ. ನಾಯಕಿ ರವೀಕ್ಷಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಘು ರಾಮಣ್ಣ ಕೊಪ್ಪ ಮತ್ತು ಗಿರಿ ಶಿವಣ್ಣ ಅವರು ಪ್ರೇಕ್ಷಕರನ್ನು ನಗಿಸುವ ಯತ್ನ ಮಾಡಿದ್ದಾರೆ.
ನಿರ್ಮಾಪಕರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ತಮಾಷೆಯಾಗಿ ಸಾಗುವ ಸಿನಿಮಾ ಬಳಿಕ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಚಿತ್ರದ ಸೆಕೆಂಡ್ ಹಾಫ್ ಕುತೂಹಲ ಮೂಡಿಸುವಂತಿದೆ. ನಿರ್ದೇಶಕರು ಒಳ್ಳೆಯ ಸಿನಿಮಾವನ್ನು ಕಟ್ಟಿಕೊಡುವ ಯತ್ನ ಮಾಡಿದ್ದಾರೆ.
ಹಾರರ್ ಕಾಮಿಡಿ ಸಿನಿಮಾಗಳನ್ನು ನೋಡುವವರಿಗೆ ಈ ಚಿತ್ರ ಇಷ್ಟವಾಗಬಹುದು.





Be the first to comment