‘ಅಣ್ಣಯ್ಯ’ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟ ವಿಕಾಶ್ ಉತ್ತಯ್ಯ ಈಗ ‘ಪಾರ್ಥನ್ ಪರಪಂಚ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.
ಶ್ರೀಹರ್ಷ ಎಂ.ಎನ್. ಅವರು ಕಥೆ, ಚಿತ್ರಕಥೆ ಬರೆದು ‘ಪಾರ್ಥನ್ ಪರಪಂಚ’ ನಿರ್ದೇಶನ ಮಾಡುತ್ತಿದ್ದಾರೆ. ‘ಸಿರಿ ಸಿನಿಮಾಸ್’ ಮೂಲಕ ಸೀತಾ ಹರ್ಷವರ್ಧನ್ ನಿರ್ಮಾಣ ಮಾಡುತ್ತಿದ್ದಾರೆ. ಮಂದಾರ, ರಂಗಾಯಣ ರಘು, ಅಮಿತ್, ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಇರುವ ಕೋರ್ಟ್ ರೂಮ್ ಡ್ರಾಮಾ. ರಂಗಾಯಣ ರಘು ಅವರು ಡಿಫೆನ್ಸ್ ಲಾಯರ್ ಹಾಗೂ ಸೀತಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ ಮಾಡುತ್ತಿದ್ದಾರೆ. ಇಡೀ ಚಿತ್ರದ ಕಥೆ ಬೆಂಗಳೂರಲ್ಲಿ ನಡೆಯುತ್ತದೆ’ ಎಂದು ಶ್ರೀಹರ್ಷ ಎಂ.ಎನ್. ಅವರು ಹೇಳಿದ್ದಾರೆ.
‘ಬ್ಲ್ಯಾಂಕ್’ ಸಿನಿಮಾ ಖ್ಯಾತಿಯ ನಟಿ ಮಂದಾರ ಅವರು ಈ ಸಿನಿಮಾದಲ್ಲಿ ಜೆನ್ ಜೀ ಹುಡುಗಿಯಾಗಿ ನಟಿಸುತ್ತಿದ್ದಾರೆ . ಸಿನಿಮಾ ರಿಯಾಲಿಟಿಗೆ ಹತ್ತಿರವಾದ ಕಂಟೆಂಟ್ ಹೊಂದಿದೆ. ಒಂದು ಕೇಸ್ ಹೇಗೆ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ ಎಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ಹೇಳುತ್ತ ಹೋಗಿದ್ದಾರೆ’ ಎಂದು ಹೀರೋ ವಿಕಾಶ್ ಹೇಳಿದ್ದಾರೆ.
ಸಿನಿಮಾಗೆ ಅನಂತ ಆರ್ಯನ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 45 ದಿನಗಳ ಶೂಟಿಂಗ್ ಪ್ಲಾನ್ ಇದೆ. 4 ಹಾಡುಗಳು ಸಿನಿಮಾದಲ್ಲಿ ಇರಲಿವೆ. ಇಂದೂ ನಾಗರಾಜ್, ಶ್ರೀಹರ್ಷ ಬೆಳ್ಮಣ್ಣು ಹಾಡಿದ್ದಾರೆ. ಜಸ್ಕರಣ್ ಸಿಂಗ್ ಒಂದು ಗೀತೆ ಹಾಡಲಿದ್ದಾರೆ.
—–





Be the first to comment