ಕಿರಣ್ ವಿಶ್ವನಾಥ್ ಅವರ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ‘ಏಳುಮಲೆ’ ಚಿತ್ರದ ನಟಿ ಪ್ರಿಯಾಂಕಾ ಆಚಾರ್ ನಟಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಅವರ ಹಲವಾರು ಚಿತ್ರಗಳ ಭಾಗವಾಗಿದ್ದ ಕಿರಣ್, ರನ್ನ, ವಿಕ್ಟರಿ ಚಿತ್ರಗಳಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಿಯಾಂಕಾ ಆಚಾರ್ ಅವರನ್ನು ನಾಯಕಿಯಾಗಿ ನಿರ್ದೇಶಕರು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಚಿತ್ರವನ್ನು ಗೌರಿ ಆರ್ಟ್ಸ್ ನಿರ್ಮಿಸಲಿದೆ.
ನಾಯಕ, ಉಳಿದ ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಶೀಘ್ರದಲ್ಲೇ ಚಿತ್ರತಂಡ ಘೋಷಿಸುವ ನಿರೀಕ್ಷೆಯಿದೆ. ಕಥೆ ಮತ್ತು ಶೆಡ್ಯೂಲ್ ಕುರಿತು ತಂಡ ಮುಂಬರುವ ವಾರಗಳಲ್ಲಿ ಹೆಚ್ಚಿನ ವಿವರಗಳನ್ನು ಪ್ರಕಟಿಸಲಿದೆ.
ಮೂಲತಃ ಮೈಸೂರಿನವರಾದ ಪ್ರಿಯಾಂಕಾ ಆಚಾರ್ ಜೀ ಕನ್ನಡದ ರಿಯಾಲಿಟಿ ಶೋ ಮಹಾನಟಿ ಕಾರ್ಯಕ್ರಮ ಗೆಲ್ಲುವ ಮೂಲಕ ಗಮನ ಸೆಳೆದರು. ನಂತರ ಸಿನಿಮಾ ಆಡಿಷನ್ ಗೆ ಹಾಜರಾದರು. ಪುನೀತ್ ರಂಗಸ್ವಾಮಿ ನಿರ್ದೇಶನ ಮತ್ತು ತರುಣ್ ಕಿಶೋರ್ ಸುಧೀರ್ ಮತ್ತು ಅಟ್ಲಾಂಟಾ ನಾಗೇಂದ್ರ ನಿರ್ಮಿಸಿದ ಎಳುಮಲೆ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈಗ ಅವರು ತಮ್ಮ ಎರಡನೇ ಚಲನಚಿತ್ರಕ್ಕೆ ಸಹಿ ಹಾಕಿದ್ದಾರೆ.
—–





Be the first to comment