‘ಸೀಟ್‌ ಎಡ್ಜ್‌’ ಟ್ರೇಲರ್ ರಿಲೀಸ್

ಸಿದ್ದು ಮೂಲಿಮನಿ ನಟನೆಯ ‘ಸೀಟ್ ಎಡ್ಜ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಸಿನಿಮಾದಲ್ಲಿ ವ್ಲಾಗರ್ ಹುಡುಗನ ಕಥೆ ಇದೆ. ಹಾಗಾಗಿ ಕನ್ನಡದ ಪ್ರಮುಖ ವ್ಲಾಗರ್​ಗಳ ಕೈಯಿಂದಲೇ  ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸಲಾಗಿದೆ. ಚಿತ್ರದಲ್ಲಿ ಸಿದ್ದು ಮೂಲಿಮನಿ ನಾಯಕ ಆಗಿ ನಟಿಸಿದ್ದು, ರವೀಕ್ಷಾ ಶೆಟ್ಟಿ ನಾಯಕಿ ಆಗಿದ್ದಾರೆ.

ಟ್ರೇಲರ್ ಬಿಡುಗಡೆ ವೇಳೆ ಸಿದ್ದು ಮೂಲಿಮನಿ ಮಾತಾಡಿ, ‘ಇದು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಮೊದಲ ಬಾರಿಗೆ ನಾನು ಯೂಟ್ಯೂಬ್‌ ವ್ಲಾಗರ್‌ ಪಾತ್ರ ಮಾಡಿದ್ದೇನೆ.  ಭಯಾನಕ್ಕೆ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು ಘೋಸ್ಟ್ ಟೌನ್​ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ’ ಎಂದು ಕಥೆಯ ಬಗ್ಗೆ ಮಾಹಿತಿ ನೀಡಿದರು.

‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಚೇತನ್ ಶೆಟ್ಟಿ ‘ಸೀಟ್‌ ಎಡ್ಜ್‌’ ಸಿನಿಮಾ  ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ  ಅವರದ್ದೇ. ‘ಎನ್‌.ಆರ್‌. ಸಿನಿಮಾ ಪ್ರೊಡಕ್ಷನ್ಸ್‌’ ಮೂಲಕ ಗಿರಿಧರ ಟಿ. ವಸಂತಪುರ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಗಿರೀಶ್ ಶಿವಣ್ಣ, ಕಿರಣ್, ತೇಜು ಪೊನ್ನಪ್ಪ, ಪುನೀತ್ ಬಾಬು, ಮನಮೋಹನ್ ರೈ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಜನವರಿ 30ರಂದು  ಸಿನಿಮಾ ರಿಲೀಸ್ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!