ಜ.23ರಂದು ಎರಡು ದೊಡ್ಡ ಸಿನಿಮಾಗಳು ರಿಲೀಸ್

ಜನವರಿ 23ರಂದು ಕನ್ನಡದ ಎರಡು ದೊಡ್ಡ  ಸಿನಿಮಾಗಳಾದ ‘ಕಲ್ಟ್’ ಮತ್ತು ‘ಲ್ಯಾಂಡ್‌ಲಾರ್ಡ್’ ರಿಲೀಸ್ ಆಗುತ್ತಿವೆ.

ಅನಿಲ್ ಕುಮಾರ್ ನಿರ್ದೇಶನದ ‘ಕಲ್ಟ್’ A ಪ್ರಮಾಣಪತ್ರ ಚಿತ್ರವಾದರೆ, ಜಡೇಶ್ ಕುಮಾರ್ ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಜಾತಿ ತಾರತಮ್ಯದ ವಿಷಯ ಆಧರಿಸಿದ ಯುಎ ಪ್ರಮಾಣ ಪತ್ರ ಪಡೆದ ಚಿತ್ರ ಆಗಿದೆ.

ಲ್ಯಾಂಡ್ ಲಾರ್ಡ್:

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.  ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ರಾಜ್ ಬಿ ಶೆಟ್ಟಿ  ವಿಲನ್ ಪಾತ್ರ ಮಾಡಿದ್ದಾರೆ. ರಾಕೇಶ್ ಅಡಿಗ, ಅಚ್ಯುತ್ ಕುಮಾರ್  ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸತ್ಯ ಪ್ರಕಾಶ್ ನಿರ್ಮಾಣದ ಈ  ಸಿನಿಮಾದ ಹಾಡುಗಳು, ಟ್ರೇಲರ್  ಮೆಚ್ಚುಗೆ ಪಡೆದಿವೆ.

ಕಲ್ಟ್:

 ಅನಿಲ್ ಕುಮಾರ್ ಅವರು ‘ಕಲ್ಟ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಝೈದ್ ಖಾನ್ ಹೀರೋ. ರಚಿತಾ ರಾಮ್, ಮಲೈಕಾ ವಾಸುಪಾಲ್, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ. ಡ್ರಾಮಾ ಹಾಗೂ ರೊಮ್ಯಾಂಟಿಕ್ ಶೈಲಿಯ ಈ ಚಿತ್ರದಲ್ಲಿ ರಚಿತಾಗೆ ಎರಡು ಶೇಡ್ ಹಾಗೂ ಝೈದ್ ಖಾನ್​​ಗೆ ಮೂರು ಶೇಡ್ ಇದೆ.

ಈ ಚಿತ್ರ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ.  ಟ್ರೇಲರ್ ಮೂಲಕ ಸಿನಿಮಾ  ಗಮನ ಸೆಳೆದಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!