ಪುರಿ ಜಗನ್ನಾಥ್ ಅವರ ಮುಂಬರುವ ಚಿತ್ರ ‘ಸ್ಲಮ್ ಡಾಗ್’ನಲ್ಲಿ ನಟ ವಿಜಯ್ ಕುಮಾರ್ ಖಳನಾಯಕನಾಗಿ ಅಭಿನಯಿಸಿದ್ದಾರೆ.
ವಿಜಯ್ ಕುಮಾರ್ ಹುಟ್ಟುಹಬ್ಬದಂದು ವಿಜಯ್ ಸೇತುಪತಿ ಅವರೊಂದಿಗಿನ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಕೈಯಲ್ಲಿ ರಕ್ತಸಿಕ್ತ ಮಚ್ಚು ಹಿಡಿದ ವಿಜಯ್ ಸೇತುಪತಿ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಆ್ಯಕ್ಷನ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದು, ಬ್ರಹ್ಮಾನಂದ, ವಿಟಿವಿ ಗಣೇಶ್ ತಾರಾಬಳಗದಲ್ಲಿದ್ದಾರೆ.
ಸ್ಲಮ್ ಡಾಗ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮೂಲಕ, ವಿಜಯ್ ಕುಮಾರ್ ಪ್ಯಾನ್-ಇಂಡಿಯಾ ಸಿನಿಮಾಗೆ ಕಾಲಿಡುತ್ತಿದ್ದಾರೆ. ಅರ್ಜುನ್ ರೆಡ್ಡಿ ಮತ್ತು ಅನಿಮಲ್ ಚಿತ್ರಗಳ ಸಂಗೀತಕ್ಕೆ ಹೆಸರುವಾಸಿಯಾದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜಿಸಿದ್ದಾರೆ.
ವೀರ ಸಿಂಹ ರೆಡ್ಡಿ (2023) ಚಿತ್ರದ ಮೂಲಕ ತೆಲುಗು ಚಿತ್ರಕ್ಕೆ ಪಾದಾರ್ಪಣೆ ಮಾಡಿದ ವಿಜಯ್ ಕುಮಾರ್ ತಮ್ಮ ತಮಿಳು ಚೊಚ್ಚಲ ಚಿತ್ರ ಮೂಕುತಿ ಅಮ್ಮನ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಯನತಾರಾ ಜೊತೆ ವಿಜಯ್ ಕುಮಾರ್ ಅಭಿನಯಿಸಿದ್ದಾರೆ.
ಪುರಿ ಕನೆಕ್ಟ್ಸ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್, ಜೆಬಿ ಮೋಷನ್ ಪಿಕ್ಚರ್ಸ್ನ ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರೊಂದಿಗೆ ನಿರ್ಮಿಸಿರುವ ‘ಸ್ಲಮ್ ಡಾಗ್’ ಚಿತ್ರ ಚಿತ್ರೀಕರಣವನ್ನು ಪೂರ್ಣಗೊಳಿಸಿ ಪೋಸ್ಟ್-ಪ್ರೊಡಕ್ಷನ್ನಲ್ಲಿದೆ.
—–





Be the first to comment